ಶಾಸಕ ನಿಂಬಣ್ಣನವರ ಕ್ಷೇತ್ರದಲ್ಲಿ ಲಂಚಾವತಾರ: ಕಾರ್ಮಿಕರ ಸ್ಥಿತಿಯೂ ಹೀಗೇನೇ..

ಧಾರವಾಡ: ಜಿಲ್ಲೆಯ ಕಲಘಟಗಿಯ ತಾಲೂಕಿನ ಕಾರ್ಮಿಕರು ಕೊರೋನಾ ಸಮಯದಲ್ಲಿ ಮತ್ತಷ್ಟು ಬೇಸರದ ಜೀವನವನ್ನ ನಡೆಸುವಂತಾಗಿದೆ. ಇದಕ್ಕೆ ಕಾರಣವಾಗಿದ್ದು, ಕಾರ್ಮಿಕ ಇಲಾಖೆಯ ಲಂಚಾವತಾರ. ಸರಕಾರಿ ಶುಲ್ಕವಿರುವುದು ಕೇವಲ 75 ರೂಪಾಯಿ ಮಾತ್ರ. ಆದರೆ, ಇಲ್ಲಿ ಪಡೆಯುತ್ತಿರುವುದು 600 ರೂಪಾಯಿ. ಇಲಾಖೆಯಲ್ಲಿ ಏಜೆಂಟರುಗಳ ಹಾವಳಿ ಹೆಚ್ಚಾಗಿದ್ದು, ಲಂಚಾವತಾರದ ವೀಡಿಯೋ ವೈರಲ್ ಆಗಿದೆ.
ಹೇಗೆ ಲಂಚಗುಳಿತನ ನಡೀತಾಯಿದೆ ನೋಡಿ.. ವೀಡಿಯೋದಲ್ಲಿದೆ