ಕಲಘಟಗಿ ಡಾಬಾದಲ್ಲಿ ನೂತನ ಗ್ರಾಪಂ ಸದಸ್ಯರಿಗೆ ಹಿಗ್ಗಾಮುಗ್ಗಾ ಥಳಿತ..!
ಕಾರವಾರ: ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಸದಸ್ಯರನ್ನ ಹಿಗ್ಗಾ ಮುಗ್ಗಾ ಥಳಿಸಿ, ಗಟಾರಿನಲ್ಲಿ ಹಾಕಿ ಹೋದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಡಾಬಾದಲ್ಲಿ ನಡೆದಿದೆ.
ಯಲ್ಲಾಪುರ ತಾಲೂಕಿನ ಕಿರವತ್ತಿ ಹಾಗೂ ಮುದ್ಮೂರ ಗ್ರಾಮ ಪಂಚಾಯತಿ ಸದಸ್ಯರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂಬಂಧ ಪ್ರವಾಸಕ್ಕೆ ಹೋದಾಗ ಕಲಘಟಗಿಯ ಡಾಬಾವೊಂದರಲ್ಲಿ ಸದಸ್ಯರು ಹೊಡದಾಡಿಕೊಂಡಿದ್ದಾರೆ. ಹೊಡೆದಾಟದ ನಂತರ ಸ್ಥಳದಿಂದ ಪರಾರಿಯಾದ ಕೆಲ ಸದಸ್ಯರ ಗುಂಪು. 5ಕ್ಕೂ ಹೆಚ್ಚು ಸದಸ್ಯರಿಗೆ ಗಾಯ, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದಲೇ ಗಲಾಟೆಯಾಗಿದ್ದು, ಮೂಲ ಬಿಜೆಪಿಗರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ವಿಚಾರಕ್ಕಾಗಿ ಗಲಾಟೆ ನಡೆದಿದ್ದು, ಹೊಡೆದಾಟದ ನಂತರ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಿಸದೇ ಮರಳಿದ್ದು, ಘಟನೆಯ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ.