ಕಲಘಟಗಿ ಶಿಕ್ಷಣ ಇಲಾಖೆಯಲ್ಲಿ ಏನು ನಡೆಯುತ್ತಿದೆ: ಶಾಸಕರೇ ನೀವೂ “ಮಾಸ್ತರ್” ಇದ್ದಾವರ್ ಸ್ವಲ್ಪ ನೋಡ್ರೀ ಸರ್..!

ಕಲಘಟಗಿ: ಪಟ್ಟಣದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನ ಶಿಕ್ಷಣ ಇಲಾಖೆ ಅರ್ಥ ಮಾಡಿಕೊಳ್ಳಬೇಕಿದೆ. ಕಚೇರಿಯಲ್ಲಿ ಬರುವ ಪಾಲಕರು- ವಿದ್ಯಾರ್ಥಿಗಳಿಗೆ ಯಾವ ಬೆಲೆ ಸಿಗುತ್ತಿದೆ ಎಂಬುದು ಕೂಡಾ ಶಾಸಕ ಸಿ.ಎಂ.ನಿಂಬಣ್ಣನವರ ಗಮನಕ್ಕೆ ಬರಬೇಕಿದೆ.
ಏನು ನಡೀತು ಎಂಬುದರ ವೀಡಿಯೋ ಇಲ್ಲಿದೆ ನೋಡಿ
ಕಲಘಟಗಿ ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅಟೇಸ್ಟೇಡ್ ಮಾಡಿಸಿಕೊಳ್ಳಲು ಹೋದರೇ ಮ್ಯಾನೇಜರ್ ಮಾತಾಡುವುದು ಬೇರೆ. ಎರಡಕ್ಕಿಂತ ಹೆಚ್ಚು ತಂದರೇ ಸಹಿ ಮಾಡಲು ತೊಂದರೆಯಾಗುತ್ತಂತೆ. ಇವರಿಗೆ ಕೊರೋನಾ ಕಾಲದಲ್ಲೂ ಹೇಗಿರಬೇಕೆಂದು ಇಲಾಖೆ ತಿಳಿಸಕೊಡಬೇಕಿದೆ.
ಕಲಘಟಗಿ ಹಾಲಿ ಶಾಸಕರು ಒಂದು ಕಾಲದಲ್ಲಿ ಮಾಸ್ತರ್ ಆಗಿದ್ದವರು. ಅವರಾದರೂ ಆಸಕ್ತಿವಹಿಸಿ ಇಂತವರಿಗೆ ತಿಳಿ ಹೇಳಬೇಕಿದೆ.