Posts Slider

Karnataka Voice

Latest Kannada News

ಕಲಘಟಗಿಯ ಬೇಗೂರು “ಓಡೋಡಿ” ಬಂಧನ: ಕದ್ದ ಸಾಗವಾನಿ ಎಲ್ಲಿಟ್ಟಿದ್ದ ಗೊತ್ತಾ..?

1 min read
Spread the love

ಧಾರವಾಡ: ಕಲಘಟಗಿ ತಾಲೂಕಿನ ತುಮರಿಕೊಪ್ಪ ವ್ಯಾಪ್ತಿಯ ಕೂಡಲಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಆಕ್ರಮವಾಗಿ ಸಾಗವಾನಿ ಮರ ಕಡಿದು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದ ಓರ್ವನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ತಾಲ್ಲೂಕಿನ ಬೇಗೂರು ಗ್ರಾಮದ ಹನುಮಂತ ಮಲ್ಲಪ್ಪ  ಓಡೋಡಿ (19) ಎಂಬಾತನನ್ನು ಬಂಧಿಸಲಾಗಿದೆ. ಇನ್ನು 3 ಜನ  ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಬಂಧಿತನಿಂದ ಸುಮಾರು 50 ಸಾವಿರ ಬೆಲೆ ಬಾಳುವ ಸಾಗವಾನಿ ಮರದ ದಿನ್ನೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಲಯ ಅರಣ್ಯಧಿಕಾರಿ ಶ್ರೀಕಾಂತ ಪಾಟೀಲ ಮಾರ್ಗದರ್ಶನದಲ್ಲಿ ಉಪ ವಲಯರಣ್ಯಧಿಕಾರಿ ಆರ್. ಜೆ ಕಡೇಮನಿ ಹಾಗೂ ಅರಣ್ಯ ರಕ್ಷಕರು ಅಮೋಘಸಿದ್ದ ಪ್ಯಾಟಿ, ಯಲ್ಲಪ್ಪ ವಡವಟ್ಟಿ, ಸುರೇಶ ಹರೋಲಿ, ಮೋನೆಶ ಲಿಂಗಶೆಟ್ಟಿ ಮತ್ತು ಅರಣ್ಯ ವೀಕ್ಷಕ ಬಾಳು, ನಾರಾಯಣ, ಗುರುನಾಥ, ತಬರೇಜ, ಕರೆಪ್ಪ, ಸಚಿನ, ಚಾಲಕ ಮಲ್ಲಿಕಾರ್ಜುನ ಕಾರ್ಯಚರಣೆಯಲ್ಲಿದ್ದರು.


Spread the love

Leave a Reply

Your email address will not be published. Required fields are marked *