ಕಲಘಟಗಿ ಬಳಿ ಅಂದರ್-ಬಾಹರ್: ಹುಬ್ಬಳ್ಳಿಯ ಆರು ಜನರ ಬಂಧನ…!

ಕಲಘಟಗಿ: ಪೊಲೀಸರು ಕಣ್ಣು ತಪ್ಪಿಸಿ ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬಗಡಗೇರಿ-ಬೋಗೆನಾಗರಕೊಪ್ಪ ರಸ್ತೆಯ ಚಿಕ್ಕಹಳ್ಳದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಆರು ಜನರನ್ನ ಬಂಧನ ಮಾಡುವಲ್ಲಿ ಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಕೌಲಪೇಟೆಯ ಅಲ್ತಾಪ ಜಾಪರಸಾಬ ಬಾದರವಾಲೆ, ಕೌಲಪೇಟೆ ನಿವಾಸಿಯಾದ ನಸರುಲ್ಲಾ ಮಕಬುಲ ಅಹಮ್ಮದ ಪಠಾಣ, ಇಮ್ರಾನ ಇಮಾಮಹುಸೇನ ಕುಂಬಿ, ಸಲೀಂ ಕಮಾಲಸಾಬ ಬೈರಿಕೊಪ್ಪ, ಅಶ್ಪಾಕ ಕರೀಮಸಾಬ ಶಿರೂರ ಹಾಗೂ ಡಾಕಪ್ಪ ಸರ್ಕಲ್ ಹತ್ತಿರದ ಕಾರಿಗಾರ ಓಣಿಯ ಮಹಮ್ಮದ ನವಾಬ ಶಕೀಲಸಾಬ ಮುಚಾಲೆ ಬಂಧಿತರಾಗಿದ್ದಾರೆ.
ಬಂಧಿತರಿಂದ 13050 ರೂಪಾಯಿ ನಗದು ಹಾಗೂ ಜೂಜಾಟಕ್ಕೆ ಬಳಕೆ ಮಾಡಿದ್ದ ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಕಲಘಟಗಿ ಠಾಣೆ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.