ಮೂರು ವರ್ಷದ ಪಾರ್ಕಿಸನ್ ರೋಗಿ ಸಾವು: ಪರೀಕ್ಷೆಯಲ್ಲಿ ವೈರಸ್ ದೃಢ
1 min readಕಲಬುರಗಿ: ಕಲಬುರಗಿಯಲ್ಲಿ ದಿನೇ ದಿನೇ ಕೊರೋನಾ ವೈರಸ್ ಮರಣ ಮೃದಂಗ ಹೆಚ್ಚುತ್ತಿದೆ. ಈಗಾಗಲೇ ಮೂರು ಜನ ಇದೇ ರೋಗದಿಂದ ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ ನಾಲ್ಕಕೇರಿದೆ. 80ವಯಸ್ಸಿನ ವೃದ್ಧರಾದ ವ್ಯಕ್ತಿ ಕಳೆದ ಮೂರು ವರ್ಷದಿಂದ ಪಾರ್ಕಿಸನ್ ರೋಗದಿಂದ ಬಳಲುತ್ತಿದ್ದರು, ಅದೇ ಕಾರಣಕ್ಕೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ರಕ್ತ ತಪಾಸಣೆ ನಂತರ ವೃದ್ಧ ಕೂಡಾ, ಕೊರೋನಾದಿಂದಲೇ ಸಾವನ್ನಪ್ಪಿದ್ದಾರೆಂದು ಸರಕಾರ ಘೋಷಣೆ ಮಾಡಿದೆ.
ಕಲಬುರಗಿಯಲ್ಲಿ ಹೆಚ್ಚು ಪ್ರಕರಣಗಳು ಬಯಲಿಗೆ ಬರುತ್ತಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಭಯ ಹೆಚ್ಚಿದೆ. ಅಷ್ಟೇ ಅಲ್ಲ, ಸ್ವತಃ ತಾವೇ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಾ, ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದು, ಜನರು ಜಿಲ್ಲಾಡಳಿತದ ತೀರ್ಮಾನಕ್ಕೆ ಬದ್ಧರಾಗಿರಬೇಕೆಂದು ಕೋರಿದ್ದಾರೆ.