ಕಲಬುರಗಿಯಲ್ಲೂ ಚಿರತೆ ಪ್ರತ್ಯಕ್ಷ: ಕೈಚೆಲ್ಲಿ ಕುಳಿತ ಅರಣ್ಯ ಇಲಾಖೆ

ಕಲಬುರಗಿ: ಸಾರ್ವಜನಿಕರ ಓಡಾಟ-ವಾಹನಗಳ ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಅಲ್ಲಲ್ಲಿ ಕಾಣತೊಡಗಿವೆ. ಇದೀಗ ಚಿರತೆಯೊಂದು ಕಬ್ಬಿನ ತೋಟದಲ್ಲಿ ಪ್ರತ್ಯಕ್ಷವಾಗಿದ್ದು, ಬೋನ್ ಇಲ್ಲದ ಕಾರಣ ಅರಣ್ಯ ಇಲಾಖೆ ಕೈಚೆಲ್ಲಿ ಕುಳಿತಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ಮತ್ಯಾನ ಬಬಲಾದ್ ಗ್ರಾಮದ ಕಬ್ಬಿನ ತೋಟದಲ್ಲಿ ಚಿರತೆ ಕಂಡು ಬಂದಿದೆ. ಇದನ್ನ ಹಿಡಿಯಲು ಬೋನ್ ಇಲ್ಲದ ಕಾರಣ, ಜೇವರ್ಗಿಯಿಂದ ಬೋನ್ ತರಿಸುವ ಪ್ರಯತ್ನ ನಡೆದಿದೆ. ಜನರಲ್ಲಿ ಆತಂಕ ಮೂಡಿಸಿರುವ ಚಿರತೆಯನ್ನ ಹಿಡಿಯುವ ಸರದಿ ಇಲಾಖೆಯವರದ್ದಾಗಿದ್ದು, ಅಲ್ಲಿಯವರೆಗೆ ಜನರ ನೆಮ್ಮದಿ ಮಾತ್ರ ಮಾಯವಾಗಿರತ್ತೆ.