ರಾಜಧಾನಿಯನ್ನೂ ಮೀರಿಸುವತ್ತ ದಾಪುಗಾಲು ಹಾಕುತ್ತಿರುವ ಬಿಸಿಲು ನಾಡು
1 min readಕಲಬುರಗಿ: ಕೊರೋನಾ ವೈರಸ್ ಪ್ರಕರಣದಿಂದ ಸಾವಿನ ಸಂಖ್ಯೆಯಲ್ಲಿ ಬೆಂಗಳೂರನ್ನೇ ಮೀರಿಸುವಂತೆ ಕಲಬುರಗಿ ಜಿಲ್ಲೆ ನಡೆದುಕೊಳ್ಳುತ್ತಿದೆ. ಸಾವಿನ ಸಂಖ್ಯೆಯ ಸ್ಪೀಡ್ ನೋಡಿದ್ರೆ ಬೆಂಗಳೂರನ್ನ ಬೀಟ್ ಮಾಡೋದು ಗ್ಯಾರಂಟಿ ಎನ್ನುವಂತಾಗಿದೆ.
ಕಲಬುರಗಿಯಲ್ಲಿ ಕರೊನಾ ಸೋಂಕಿನಿಂದ ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. 1 ಕೋಟಿಗಿಂತ ಅಧಿಕ ಜನರಿರುವ ಬೆಂಗಳೂರಿನಲ್ಲಿ ಕೊರೋನಾದಿಂದ 7 ಸಾವಾಗಿವೆ. 30 ಲಕ್ಷ ಜನಸಂಖ್ಯೆ ಹೊಂದಿರುವ ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಕೊರೋನಾದಿಂದಲೇ ಏಳು ಜನ ಮೃತಪಟ್ಟಿದ್ದಾರೆ.
ಕಲಬುರಗಿಯಲ್ಲಿ ದಾಖಲಾದ ಪಾಸಿಟಿವ್ ಕೇಸ್ ನ ಹತ್ತರಲ್ಲಿ ಒಬ್ಬರು ಸಾವು. ಕಲಬುರಗಿಯಲ್ಲಿ 81 ಕ್ಕೆ ಏರಿಕೆಯಾದ ಕೊರೋನಾ ಸೋಂಕಿತರ ಸಂಖ್ಯೆ. ಬಿಸಿಲನಾಡು ಕಲಬುರಗಿಯಲ್ಲಿ ಕಂಟ್ರೋಲ್ ಗೆ ಸಿಗದ ಸೊಂಕು. ಸಾವಿನ ಏರಿಕೆ ಕಂಡು ಬೆಚ್ಚಿ ಜಿಲ್ಲಾಡಳಿತ ಮತ್ತಷ್ಟು ಬೆಚ್ಚಿಬಿದ್ದಿದೆ.