ಕಳಸಾ ಹೋರಾಟಗಾರರೊಂದಿಗೆ ಜಾರಕಿಹೊಳಿ ಭೇಟಿ ಮಾಡಿದ ಶಂಕರ ಪಾಟೀಲಮುನೇನಕೊಪ್ಪ..!
1 min readಬೆಂಗಳೂರು: ರಾಜ್ಯದ ಪಾಲಿನ ಕಳಸಾ-ಬಂಡೂರಿ ನೀರು ಪಡೆಯಲು ರಾಜ್ಯ ಸರಕಾರ ಆದಷ್ಟು ಬೇಗ ಮುಂದಾಗಬೇಕೆಂದು ಕೋರಿದ ಕಳಸಾ-ಬಂಡೂರಿ ಹೋರಾಟ ಸಮಿತಿಯ ಸದಸ್ಯರು, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರನ್ನ ಭೇಟಿ ಮಾಡಿದರು.
ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ನೇತೃತ್ವದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಮುಪ್ಪಯ್ಯನವರ, ಸಚಿವ ರಮೇಶ ಜಾರಕಿಹೊಳಿ ಅವರಿಗೆ ಈ ಭಾಗದ ಜನರ ಸಮಸ್ಯೆಯನ್ನ ವಿವರಿಸಿದರು. ಅಷ್ಟೇ ಅಲ್ಲ, ಬೇಗನೇ ಕಾಮಗಾರಿಯನ್ನ ಮುಗಿಸಿ ನೀರು ಬರುವಂತೆ ಮಾಡಬೇಕೆಂದು ಮನವಿ ಮಾಡಿದರು.
ರೈತರ ಮಾತುಗಳನ್ನ ಆಲಿಸಿದ ಸಚಿವ ರಮೇಶ ಜಾರಕಿಹೊಳಿ, ಕಳಸಾ-ಬಂಡೂರಿ ನೀರಿನ ಯೋಜನೆಯ ಅನುಷ್ಟಾನ ನಮ್ಮ ಸರಕಾರದ ಮೊದಲ ಆಧ್ಯತೆಯ ಯೋಜನೆಯಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.
ನಮ್ಮ ಪಾಲಿನ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳುವುದು ನಮ್ಮ ಹಕ್ಕಾಗಿದೆ ಎಂದ ರಮೇಶ ಜಾರಕಿಹೊಳಿ ಅವರು, ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು, ಕೂಡಲೇ ಬೆಳೆವಿಮೆ ಮತ್ತು ಪರಿಹಾರ ಹಣವನ್ನ ಬಿಡುಗಡೆ ಮಾಡುವ ಕುರಿತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಸಮಿತಿಯ ಅಧ್ಯಕ್ಷ ದ್ಯಾಮಪ್ಪಯ್ಯ, ಮಲ್ಲಿಕಾರ್ಜುನಗೌಡ ಪಾಟೀಲಕುಲಕರ್ಣಿ, ಭಗವಂತಪ್ಪ ಪುಟ್ಟಣ್ಣನವರ, ಸಂಜೀವ ನಿಡವಣಿ, ಸುಭಾಸಚಂದ್ರಗೌಡ ಪಾಟೀಲ, , ರಘುನಾಥರೆಡ್ಡಿ ನಡುವಿನಮನಿ, ಗುರುನಾಥ ಪಲ್ಲೇದ, ಜಯರಾಜ ಪಾಟೀಲ, ರವಿಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.