Posts Slider

Karnataka Voice

Latest Kannada News

ಕಳಸಾ-ಬಂಡೂರಿ ಮಲಪ್ರಭೆಗೆ ಜೋಡಣೆ: 500 ಕೋಟಿ ನೀಡಿದ ರಾಜ್ಯ ಸರಕಾರ

1 min read
Spread the love

ಬೆಂಗಳೂರು: ಬಹುದಿನಗಳ ರೈತರ ಕನಸಾಗಿರುವ ಕಳಸಾ-ಬಂಡೂರಿ ನಾಲಾ ಜೋಡಣೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷಕ್ಕೆ 500 ಕೋಟಿ ರೂಪಾಯಿ ಮೀಸಲಿಡಲು ಮುಂದಾಗಿದ್ದು, ಉತ್ತರ ಕರ್ನಾಟಕದ ರೈತರ ಕನಸಿಗೆ ನನಸಿನ ಮುದ್ರೆ ಒತ್ತಿದೆ.

ಬಜೆಟ್ ನಲ್ಲಿ ಹೇಳಿಕೆ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಹೊರಡಿಸಿದ ನೊಟೀಫೀಕೇಶನ್ ಬಗ್ಗೆ ಪ್ರಸ್ತಾಪಿಸಿ ಕೇಂದ್ರಕ್ಕೆ ಧನ್ಯವಾದ ತಿಳಿಸಿದರು. ಇದರ ಜೊತೆಗೆ ಕಾಮಗಾರಿ ನಡೆಸಲು 500 ಕೋಟಿ ರೂಪಾಯಿ ಮೀಸಲಿಡಲು ನಿರ್ಧಿರಿಸಿರುವ ಬಗ್ಗೆ ಪ್ರಕಟಿಸಿದರು.

ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಇತ್ತೀಚೆಗೆ ಮಹದಾಯಿ ಯೋಜನೆಗಾಗಿ ಹಣವನ್ನ ಮೀಸಲಿಡಲು ಸಿಎಂಗೆ ಕೋರುವುದಾಗಿ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *

You may have missed