ಜ್ಯುಬಿಲಿಯಂಟ್ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಿದ ರಾಜ್ಯ ಸರಕಾರ
1 min readಮೈಸೂರು: ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರಂಭ ವಿಚಾರವಾಗಿ ಇಲ್ಲಿಗೆ ಭೇಟಿ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಖಾನೆ ತೆರೆಯಲು ಅನುಮತಿ ನೀಡಿದ್ದೇವೆ ಎಂದು ಹೇಳಿದರು.
ಜ್ಯುಬಿಲಿಯೆಂಟ್ ಫಾರ್ಮಾಸಿಟಿಕಲ್ ಕಂಪನಿ. ಬಾಗಿಲು ಹಾಕಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯಲು ಅನುಮತಿ ಕೇಳಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ತೆರೆಯುವ ಸಂದರ್ಭದಲ್ಲಿ ಹೇಗಿದೆ, ಅಲ್ಲಿನ ಪರಿಸ್ಥಿತಿ ಏನು ಎಂಬುದನ್ನು ನೋಡಬೇಕಿದೆ. ಅದನ್ನು ನೋಡಿಕೊಂಡು ಕಾರ್ಖಾನೆ ತೆರೆಯಲಾಗುವುದು ಎಂದು ಹೇಳಿದರು.
ಅಂತಾರಾಜ್ಯ ಚಲನವಲನ ನಿಗಾ
ಅಂತಾರಾಜ್ಯ ಚಲನವಲನಗಳನ್ನು ನಿಯಂತ್ರಿಸುತ್ತಿದ್ದೇವೆ. ಕೊರೊನಾ ಕೇಸ್‌ಗಳು ಜಾಸ್ತಿ ಆಗುತ್ತಿವೆ. ಆದ್ದರಿಂದ ಅಂತರ ಜಿಲ್ಲಾ ಪ್ರವಾಸದ ಮೇಲೂ ನಿಯಂತ್ರಣ ಬೇಕು. ಮುಂಬೈನಿಂದ ಬಂದ ವಲಸಿಗರಿಂದ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿವೆ. ಆದ್ದರಿಂದ, ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಲಾಕ್‌ಡೌನ್ 4 ಮುಗಿದ ಮೇಲೆ ಏನು ಮಾಡಬೇಕು ಎಂಬುದನ್ನು ಚಿಂತನೆ ಮಾಡಬೇಕಿದೆ. ಈ ಬಗ್ಗೆ ಇನ್ನಷ್ಟೇ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಮೈಸೂರು ಜಿಲ್ಲಾಡಳಿತ ಜ್ಯುಬಿಲಿಯೆಂಟ್, ದೆಹಲಿ ಮೂಲದಿಂದ ಬಂದಿದ್ದ ಕೇಸ್ ಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಮುಂಬೈ ಮೂಲದ ಕೇಸ್‌ಗಳ ಸವಾಲನ್ನೂ ಯಶಸ್ವಿಯಾಗಿ ನಿರ್ವಹಿಸಲೇಬೇಕಿದೆ ಎಂದ ಸಚಿವರು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಲೀಸರಿಗೆ ಎ್ಚರಿಕೆ ನೀಡಿದ ಗೃಹ ಸಚಿವರು
ಕರೊನಾ ಸೋಂಕಿತರ ಜತೆ ಕೆಲಸ ಮಾಡುವ ಪೊಲೀಸರು ಎಚ್ಚರಿಕೆಯಿಂದ ಇರಬೇಕು. ಲಾಕ್ ಡೌನ್ ಯಶಸ್ಸು ಮತ್ತು ಮತ್ತು ಕೊರೊನಾ ನಿಯಂತ್ರಣದಲ್ಲಿ ಪೊಲೀಸರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಆದ್ದರಿಂದಲೇ ಹಲವು ಕಡೆ ಪೊಲೀಸರೇ ಸೋಂಕಿಗೆ ಒಳಗಾಗಿದ್ದಾರೆ. ಸೋಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೇದೆಗೆ ಕೋರೊನಾ ಬಂದಿತ್ತು. ಪೊಲೀಸ್ ಠಾಣೆಯಲ್ಲಿದ್ದ ಕೈದಿಗೆ ಕೋರೊನಾ ಬಂದಿತ್ತು. ಶಿವಮೊಗ್ಗ, ಬೆಂಗಳೂರು ನಂತರ ಈಗ ಕೆ.ಆರ್. ಪೇಟೆಯಲ್ಲಿ ಪೇದೆ ಕೊರೋನಾ ಹರಡಿದೆ. ಈ ಹಿನ್ನೆಲೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿಗೆ ಟೆಸ್ಟ್ ಮಾಡಿಸುತ್ತಿದ್ದೇವೆ. ಡ್ಯೂಟಿ ಹಾಕುವಾಗ ಒತ್ತಡ ಆಗದಂತೆ ಎಚ್ಚರ ವಹಿಸುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಇನ್ಶೂರೆನ್ಸ್ ಪಾಲಿಸಿ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.