“ಸುಧೀರ ಸರಾಫ್” ನಿಧನ: ಮನಸ್ಸು ಭಾರ ಮಾಡಿಕೊಂಡ ಸಚಿವ ಪ್ರಲ್ಹಾದ ಜೋಶಿ…!

ನವದೆಹಲಿ: ಸುಧೀರ್ ಸರಾಫ್ ನಿಧನ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ, ಮನಸ್ಸು ಭಾರವಾಗಿದೆ. ನನ್ನ ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಡಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕಂಬನಿ ಮಿಡಿದಿದ್ದಾರೆ.

ಸದಾ ಲವಲವಿಕೆಯಿಂದ ಇರುತ್ತಿದ್ದ ಸುಧೀರ್ ಸರಾಫ್ ಇನ್ನೇನು ಅವರು ಗುಣಮುಖರಾಗಿ ಹೊರ ಬರುತ್ತಾರೆಂಬ ಭಾವನೆಗಳ ಮಧ್ಯೆ ಘಟಿಸಿರುವ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಪಾಲಿಕೆ ಸದಸ್ಯರಾಗಿ ಆ ನಂತರ ಮೇಯರ್ ಹುದ್ದೆ ಅಲಂಕರಿಸಿ ಮಾಡಿದ ಕೆಲಸ ಅಪಾರ. ಅವೆಲ್ಲವೂ ಈಗ ನೆನಪು ಮಾತ್ರ ಎಂದಿರುವ ಜೋಶಿ, ಸ್ನೇಹಜೀವಿ, ಸದಾ ಉಲ್ಲಸಿತರಾಗಿ ಗೆಳೆಯರಲ್ಯಾರಾದರೂ ತೊಂದರೆಗೆ ಸಿಲುಕಿದ ವಿಚಾರ ತಿಳಿದರೆ ತತಕ್ಶಣ ನೆರವಿಗೆ ಧಾವಿಸಿ , ಅಗತ್ಯ ಸವಲತ್ತುಗಳನ್ನು ಒದಗಿಸಿ , ಪರಿಸ್ಥಿತಿ ಒಂದು ಹದಕ್ಕೆ ಬರುವವರೆಗೂ ಜಪ್ಪಯ್ಯ ಎಂದರೂ ಕದಲದ ಅಪರೂಪದ ವ್ಯಕ್ತಿ.

ಪಾದರಸದಂಥ ಕ್ರಿಯಾಶೀಲ ವ್ಯಕ್ತಿತ್ವ, ಮನೋಭಾವ ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯಂತೂ ಅಲ್ಲ. ಆತ್ಮೀಯರ ನೋವಿಗೆ ಮಿಡಿದು ನೆರವಿಗೆ ಸಮಯ – ಶ್ರಮದ ಪರಿವೆಯಿಲ್ಲದೆ ಧಾವಿಸುವ ಸರಾಫ್ ನಮ್ಮೊಂದಿಗಿಲ್ಲ ಎಂಬ ಸುದ್ಧಿ ನಂಬಲಸಾಧ್ಯ. ಬದುಕಿಬರಬಹುದು’ ಎಂದು ಎಲ್ಲೋ ಒಂದು ಕಡೆ ಮಿನುಗುತ್ತಿದ್ದ ಆಸೆ ಕೊನೆಗೂ ಹುಸಿಯಾಯಿತು. ‘ಯಾವ ಸಮಯದಲ್ಲಿ, ಯಾವ ರೂಪದಲ್ಲಿ ದೇವರು ಯಾರನ್ನು ಯಾವಾಗ ಕರೆದುಕೊಂಡು ಹೋಗುತ್ತಾನೋ ಅವನೇ ಬಲ್ಲ. ಎಲ್ಲವೂ ವಿಧಿಯಾಟ.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದೂ ಜೋಶಿ ಹೇಳಿದ್ದಾರೆ.