ಬೆಳಗಾವಿ ಬಿಜೆಪಿ ನಾಯಕರ ಬಂಡಾಯ: ನಾ ಮಾತಾಡೋಕೆ ಒಲ್ಲೆ ಎಂದ ಮಹಿಳಾ ಸಚಿವೆ
ಹುಬ್ಬಳ್ಳಿ: ಬೆಳಗಾವಿ ಬಂಡಾಯ ಶಾಸಕರ ವಿಚಾರವಾಗಿ ಏನೂ ಮಾತಾಡೋಕೆ ಒಲ್ಲೆ ಎಂದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ. ಶಾಸಕ ಉಮೇಶ ಕತ್ತಿ ವಿಚಾರಕ್ಕೆ ನೋ ಕಾಮೆಂಟ್ಸ್. ಒಂದು ಮನೆಯಲ್ಲಿ ಜಗಳ ಇರುತ್ತದೆ. ನಮ್ಮ ಮನೆಯಲ್ಲಿ ಜಗಳ ಮುಗಿಸಲಾಗುವುದು. ಅದನ್ನು ಹಿರಿಯರು, ಮುಖಂಡರು ಬಗೆಹರಿಸುತ್ತಾರೆಂದಷ್ಟೇ ಹೇಳಿದರು.
ನನ್ನನ್ನು ಸಚಿವ ಸ್ಥಾನದಿಂದ ಕೈಬಿಡುವುದು ಊಹಾಪೋಹ ಅಷ್ಟೇ. ಬಹಳ ಕಷ್ಟಪಟ್ಟು ಪಾರ್ಟಿ ಸಂಘಟನೆ ಮಾಡಿ ಬೆಳೆದಿದ್ದೇನೆ. ಸಚಿವ ಸ್ಥಾನ ಕೈ ತಪ್ಪುತ್ತೇ ಎಂದು ನನಗೆ ಅನ್ಸೋದಿಲ್ಲ. ಪಕ್ಷದ ನಿರ್ಣಯಕ್ಕೆ ಬದ್ಧವಾಗಿ ಕೆಲಸ ಮಾಡ್ತೇನಿ. ಬಿಜೆಪಿ ಪಕ್ಷದಲ್ಲಿ ಬೇರೆಯವರು ಹೇಗೆ ಬೆಳೆದು ಬಂದಿದ್ದಾರೆ ನನಗೆ ಗೊತ್ತಿಲ್ಲ. ಬೇರೆಯವರ ಬಗ್ಗೆ ನೋ ಕಾಮೆಂಟ್ಸ್ ಅಂದು ಜೊಲ್ಲೆ.