ಜೋಯಿಡಾದಲ್ಲಿ ‘90’ರ ಅಜ್ಜಿಯಿಂದಲೂ ಮತದಾನ

ಜೊಯಿಡಾ: ತಾಲೂಕಿನಲ್ಲಿ ಗ್ರಾ.ಪಂ ಚುನಾವಣೆ ಸಂಪನ್ನಗೊoಡಿದೆ. 16 ಗ್ರಾಮ ಪಂಚಾಯತಿಗಳ 137 ಸ್ಥಾನಗಳ ಪೈಕಿ ಎರಡು ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿದೆ. 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಉಳಿದ 134 ಸ್ಥಾನಗಳಿಗೆ ತುರುಸಿನಿಂದ ಮತದಾನವಾಗಿದೆ.
ಜೊಯಿಡಾ ಮತಗಟ್ಟೆಯಲ್ಲಿ 90 ವರ್ಷದ ರಾಧಿಕಾ ಆಚಾರಿ ತಮ್ಮ ಸಂಬಂಧಿಕರ ನೆರವಿನಿಂದ ಬಂದು ಮತದಾನ ಮಾಡಿದ್ದಾರೆ. ಕಳೆದ ಎಲ್ಲಾ ಚುನಾವಣೆಗಳಲ್ಲೂ ಮತದಾನ ಮಾಡಿದ ಗೌರಾಯಿ ಮಹಾದೇವ ಗಾವಡಾ ಇವಳಿಗೆ ಮತದಾನಕ್ಕೆ ಅವಕಾಶ ನೀಡಲಿಲ್ಲ ಎಂದು ಬೇಸರದಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಕಾರಣ ಅವಳ ಹೆಸರು ಮತದಾರರ ಪಟ್ಟಿಯಲ್ಲಿ ಇರಲಿಲ್ಲ ಅವಳ ಹತ್ತಿರ ಗುರುತಿನ ಚೀಟಿ ಇತ್ತು.
ಈ ಸಲ ಮತದಾನಕ್ಕೆ ಹೆಚ್ಚಿನ ಜನರು ಆಸಕ್ತಿಯಿಂದ ಬಂದಿರುವುದು ಕಂಡುಬಂದಿತು. ಕಾರಣ ತಮ್ಮವರಿಗೆ ಮತನೀಡೋಣ ಎಂದು ಹಿಂದೆಲ್ಲಾ ಪಕ್ಷದ ಬೆಂಬಲಿಗರಷ್ಟೇ ಚುನಾವಣಾ ಅಖಾಡದಲ್ಲಿ ಇರುತ್ತಿದ್ದರು. ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಸ್ವತಂತ್ರರು ನಿಂತಿರುವುದೇ ಜನರ ಉತ್ಸಾಹಕ್ಕೆ ಕಾರಣ ಎಂದು ತಿಳಿದು ಬಂದಿದೆ. ಪಕ್ಷಗಳ ಬೆಂಬಲಿಗರಿಗಿಂತ ಸ್ವತಂತ್ರರೇ ಹೆಚ್ಚು ಸ್ಪರ್ಧಿಸಿರುವುದು ಪಕ್ಷಗಳ ಬೆಂಬಲಿತ ಅಭ್ಯರ್ಥಿ ಗಳಿಗೆ ಇರುಸು ಮುರುಸಾಗಿದೆ ಹೀಗಾಗಿ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿ ಹೆಚ್ಚಾಗಿದೆ.
ಒಟ್ಟಾರೆ ತಾಲೂಕಿನಲ್ಲಿ ಗ್ರಾ.ಪಂ. ಚುನಾವಣೆಯೂ ಶಾಂತಿಯುತವಾಗಿ ನಡೆದಿದೆ.