ಜೋಯಿಡಾ ಶಿಕ್ಷಕರ ಸಂಘದ ಜಯಭೇರಿ: ಯಶವಂತ ನಾಯ್ಕ ಬಣ ಜಯಭೇರಿ

ಜೋಯಿಡಾ: ಜೋಯಿಡಾ ತಾಲೂಕು ಶಿಕ್ಷಕರ ಸಂಘದ ಚುನಾವಣೆಯಲ್ಲಿ ಯಶವಂತ ನಾಯ್ಕ ಬಣ ಬಹುಮತದಿಂದ ಜಯಭೇರಿ ಬಾರಿಸಿದ್ದು, ಪ್ರತಿಸ್ಪರ್ಧಿಗಳು ಠೇವಣಿ ಕಳೆದುಕೊಳ್ಳುವ ಹಾಗೇ, ನಾಯ್ಕ ತಂಡಕ್ಕೆ ಬೆಂಬಲ ನೀಡಿದೆ.
ಜೋಯಿಡಾ ತಾಲೂಕು ಶಿಕ್ಷಕದ ಸಂಘದ 242 ಮತದಾರರ ಪೈಕಿ 224 ಶಿಕ್ಷಕರು ಮತಗಳನ್ನ ಚಲಾಯಿಸಿದ್ದರು. ಇದರಲ್ಲಿ ಯಶವಂತ ನಾಯ್ಕ 209, ಮಾದೇವ ಹಳದನಕರ 191 ಹಾಗೂ ಶ್ರೀಕಾಂತ ಕಾಂಬಳೆ 167 ಮತಗಳನ್ನ ಪಡೆದರು. ಪ್ರತಿಸ್ಪರ್ಧಿಗಳಾದ ಕೆ.ಎಸ್.ಟೊನ್ನಿ, ಆರ್.ಎನ್. ಚವ್ಹಾಣ, ಸದಾನಂದ ಪಟಗಾರ ಕ್ರಮವಾಗಿ 21, 18 ಹಾಗೂ 21 ಮತಗಳನ್ನ ಪಡೆದು ಠೇವಣಿಯನ್ನ ಕಳೆದುಕೊಂಡರು.
ಈ ಚುನಾವಣೆಯ ಮೂಲಕ ಯಶವಂತ ನಾಯ್ಕ ಬಣದ ಒಟ್ಟು ಐದೂ ಸದಸ್ಯರು ಆಯ್ಕೆಯಾದಂತಾಗಿದೆ. ಮೊದಲೇ ಇಬ್ಬರ ಅವಿರೋಧ ಆಯ್ಕೆಯಾಗಿತ್ತು. ಇದರಿಂದ ನಾಯ್ಕ ಬಣಕ್ಕೆ ಶಿಕ್ಷಕ ಸಂಘದ ಆಡಳಿತ ಚುಕ್ಕಾಣಿ ದೊರೆತಂತಾಗಿದೆ.