ಜೋಯಿಡಾ ರೆಸಾರ್ಟಲ್ಲಿ ಧಾರವಾಡ ಗ್ರಾಮಾಂತರ ಬಿಜೆಪಿಯ ಅಭ್ಯಾಸವರ್ಗ…!
1 min readಜೋಯಿಡಾ: ತಾಲೂಕಿನ ಗಣೇಶಗುಡಿಗೆ ಅಂಟಿಕೊಂಡಿರುವ ರೆಸಾರ್ಟ್ ವೊಂದರಲ್ಲಿ ಭಾರತೀಯ ಜನತಾ ಪಕ್ಷದ ಧಾರವಾಡ ಗ್ರಾಮಾಂತರ ಘಟಕದ ಅಭ್ಯಾಸ ವರ್ಗ ನಡೆಯುತ್ತಿದೆ.
ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪ್ರಶಿಕ್ಷಣ_ವರ್ಗವೂ ಇಂದು ಅಂತ್ಯಗೊಳ್ಳಲಿದ್ದು, ಪಕ್ಷ ಸಂಘಟನೆಯ ಕುರಿತಂತೆ ಸುಧೀರ್ಘವಾದ ಮಾಹಿತಿಗಳನ್ನ ನೀಡಲಾಗುತ್ತಿದೆ.
ಪ್ರಶಿಕ್ಷಣ ವರ್ಗವನ್ನು ಏಳು ಅವಧಿಗಳನ್ನಾಗಿ ಮಾಡಲಾಗಿತ್ತು. ವಿಷಯ ಪ್ರಮುಖರಾದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಗದಗ ಜಿಲ್ಲಾ ಖಜಾಂಚಿ ನಾಗರಾಜ ಕುಲಕರ್ಣಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷ ಭೋಜರಾಜ ಕರೂದಿ, ರಾಜ್ಯ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಪ್ರಶಾಂತ ಜಾಧವ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಸವಾ ಅವಧಿಗಳನ್ನು ನಿನ್ನೆ ತೆಗೆದುಕೊಂಡರು.
ಈ ಅಭ್ಯಾಸ ವರ್ಗದಲ್ಲಿ ಪಕ್ಷದ ಅಪೇಕ್ಷಿತ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.