ನೌಕರಿ ಹುಡುಕುತ್ತಿದ್ದೀರಾ, ಧಾರವಾಡದಲ್ಲಿದೆ ನಿಮಗೊಂದು “ಸುವರ್ಣ ಅವಕಾಶ”…!!!
1 min readಧಾರವಾಡ: ನೀವು ನೌಕರಿಯನ್ನ ಹುಡುಕುತ್ತಿದ್ದೀರಾ, ನಿಮ್ಮ ಜಿಲ್ಲೆಯಲ್ಲಿಯೇ ನಿಮಗೆ ನೌಕರಿ ಬೇಕಾ. ಹಾಗಾದ್ರೇ, ಗುರುವಾರ ಧಾರವಾಡದಲ್ಲಿ ಆಯೋಜನೆ ಮಾಡಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಬದುಕು ಕಟ್ಟಿಕೊಳ್ಳಿ.
ಯುವ ಮುಖಂಡ ಮಂಜುನಾಥ ಹೆಬಸೂರ ಮಾಡಿಕೊಂಡ ಮನವಿ ಇಲ್ಲಿದೆ…
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಕಾರದಲ್ಲಿ ಶಾಸಕ ಅರವಿಂದ ಬೆಲ್ಲದವರ ಮಾರ್ಗದರ್ಶನದಲ್ಲಿ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಧಾರವಾಡದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮೊದಲ ಬಾರಿಗೆ ಮಂಜುನಾಥ ಹೆಬಸೂರು ಗೆಳೆಯರ ಬಳಗದ ವತಿಯಿಂದ ನಿರುದ್ಯೋಗ ನಿವಾರಿಸುವ ಸಣ್ಣ ಪ್ರಯತ್ನ ಬೃಹತ್ ಉದ್ಯೋಗ ಮೇಳ ಆಯೋಜಿಸುವ ಮೂಲಕ ನಡೆಯುತ್ತಿದೆ.
ಡಿಸೆಂಬರ್ 5ರಂದು ಗುರುವಾರ ಬೆಳಿಗ್ಗೆ 09.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಸಂದರ್ಶನ ಪ್ರಕ್ರಿಯೆ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ನಲವತ್ತಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡುವ ಭರವಸೆಯನ್ನು ಈ ಕಂಪನಿಗಳು ನೀಡಿವೆ.
ವಿಶೇಷವಾಗಿ ಈ ಉದ್ಯೋಗ ಮೇಳದಲ್ಲಿ ವಿಕಲಚೇತನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕೆಲವು ಕಂಪನಿಗಳು ಭಾಗವಹಿಸುತ್ತಿವೆ.
ಈ ಉದ್ಯೋಗ ಮೇಳದಲ್ಲಿ ಇನ್ನೊವಾಸೋರ್ಸ ಸರ್ವಿಸಸ್, ಮಾಣಿಕಬಾಗ ಆಟೋಮೊಬೈಲ್ಸ, ಯುತ್ತ ಫಾರ ಜಾಬ್ಸ, ಕಿಯಾ ಶೋರೂಂ ಬೆಳಗಾವಿ, ಬೆಲ್ಲದ ಗ್ರುಪ್ ಆಫ್ ಕಂಪನೀಸ, 555 ಮಂಕಿ ಇಂಡಸ್ಟ್ರಿಸ, ಸ್ಕಾಯಟೆಕ ಸಲ್ಯುಶನ್ಸ, ಎಕಸ ಎಕೊಸಿಸ್ಟಮ ಎಫಿಸಿಯನ್ಸಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ.
SSLC, PUC, ANY DEGREE, ITI,DIPLOMA, BEd,MBA, MTEC, BE ಕಲಿತಿರುವ ಯುವಕರಿಗೆ ಜೊತೆಗೆ ಹೆಚ್ಚಿನ ಅನುಭವ ಇರುವಂತಹ ಯುವಕ, ಯುವತಿಯರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7353307657, 9686260451, 9535360256, 8453208555.