ಧಾರವಾಡದ “JK” ಎಂಬ ಅಪತ್ಪಾಂಧವ- ಸಂಕಷ್ಟದಲ್ಲಿದ್ದವರಿಗೆ ‘ಉಪಕಾರಿ’…
1 min readಕಷ್ಟವಿದ್ದ ಸ್ಥಳದಲ್ಲಿ ಹಾಜರ್
ಸಹಾಯ ಮಾಡಿ, ಹೊರಡುವ ಯುವಕ
ಪೊಲೀಸರಿಗೂ ಆಪ್ತನಾದರೂ, ದ್ರೋಹ ಬಗೆಯದ ಮನಸ್ಸು
ಧಾರವಾಡ: ಈತನಲ್ಲಿ ಇರೋ ಬೈಕಿಗೆ ಹೋಗುವ ಜಾಗ ಗೊತ್ತಿರಲ್ಲ. ಆತನಿಗಂತೂ ಗೊತ್ತಿರಲೂ ಸಾಧ್ಯವೇ ಇಲ್ಲ. ಏಕೆಂದರೆ, ಎಲ್ಲಿ ಅಪಘಾತ, ಸಮಸ್ಯೆ ಆಗಬಹುದೆಂದು ಆತನಿಗೇನು ಗೊತ್ತಿರತ್ತೆ. ಸೋಜಿಗವೆಂದರೇ, ಧಾರವಾಡ ನಗರ ಸೇರಿದಂತೆ ಅಕ್ಕಪಕ್ಕದಲ್ಲಿ ಏನೇ ನಡೀಲಿ, ಈತ ಸಹಾಯಕ್ಕೆ ನಿಂತಿರ್ತಾನೆ. ಆತ ಬೇರಾರೂ ಅಲ್ಲ ಜೆಕೆ @ ಜೆಕೆ ಸರ್ಕಾರ @ ಜೆಲಾನಿ ಖಾಜಿ ಎಂಬ ಮಾನವಪ್ರಿಯ ಯುವಕ.
ಚೆಂದಗಿರುವ ಈತ ಎಲ್ಲರಿಗೂ ಉಪಕಾರಿ. ಹಲವು ಪತ್ರಕರ್ತರಿಗೆ ಜೆಕೆ ಅಂದ್ರೆ ಇಷ್ಟ. ಆತನಿಂದಲೇ ಅಪಘಾತದ ನೂರೆಂಟು ಭಾವಚಿತ್ರಗಳು ಸಿಗ್ತವೆ. ಹಾಗಂತ, ಯಾವುದಾದರೂ ಪೊಲೀಸರ ಬಗ್ಗೆ ವಯಕ್ತಿಕ ಮಾಹಿತಿ ಕೇಳಿದ್ರೇ “ಎಣ್ಣೆ” ಹಚ್ಚಿಕೊಂಡವನಂತೆ ಜಾರಿಕೊಳ್ಳುತ್ತಾನೆ.
ಮನೆಯಲ್ಲಿ ಸಮೃದ್ಧ ಬದುಕಿದ್ದರೂ ಈತನಿಗೆ ಜನರ ಸಂಕಷ್ಟಗಳಿಗೆ ಮಿಡಿಯುವ ಇರಾದೆ. ಸರಿಯಾದ ಸಮಯದಲ್ಲಿ ಊಟ ಮಾಡ್ತಾನೋ ಇಲ್ಲೋ ಗೊತ್ತಿಲ್ಲ. ಆದರೆ, ಎಲ್ಲೇ ಜನ ತೊಂದರೆಯಲ್ಲಿರಲಿ, ಈತ ಅಲ್ಲಿ ಇದ್ದು ಸಹಾಯ ಮಾಡ್ತಾನೆ.
ಇಂತವರ ಸಂಖ್ಯೆ ಹೆಚ್ಚಾಗಬೇಕಿದೆ. ‘ಜೆಕೆ’ ಗೆ ಅಂಬ್ಯುಲೆನ್ಸ್ ತೆಗೆದುಕೊಂಡು ಜನರ ಸೇವೆ ಮಾಡಬೇಕು ಎಂಬ ಕನಸ್ಸಿದೆ. ಆ ಕನಸು ನನಸು ಮಾಡಲು ಮನುಷ್ಯಪ್ರೇಮಿಗಳು ಸಾಥ್ ನೀಡಬೇಕಿದೆ.