ಹುಬ್ಬಳ್ಳಿ ತಾಲೂಕು ಇಂಗಳಳ್ಳಿಯಲ್ಲಿ “JJM” ಹಗರಣ- ಕಿಕ್‌ಬ್ಯಾಕ್ ಪಡೆದಿದ್ಯಾರು…!?
1 min readಹುಬ್ಬಳ್ಳಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಷಿನ್ ಯೋಜನೆ ಉಳ್ಳವರ ಪಾಲಾಗುತ್ತಿದ್ದು, ಸರಕಾರದ ಲಕ್ಷಾಂತರ ರೂಪಾಯಿಗಳನ್ನ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಹುಬ್ಬಳ್ಳಿ ತಾಲೂಕಿನ ಇಂಗಳಳ್ಳಿ ಗ್ರಾಮದ ಪ್ರಮುಖರು ದೂರು ನೀಡಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಅತ್ಯುತ್ತಮ ರೀತಿಯ ಕುಡಿಯುವ ನೀರು ಸಿಗಬೇಕೆಂದು ಆರಂಭಗೊಂಡಿರುವ ಯೋಜನೆ ಹೇಗೇಲ್ಲಾ ಉಳ್ಳವರಿಗೆ ಅನುಕೂಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಇಂಗಳಳ್ಳಿ ಗ್ರಾಮದಲ್ಲಿನ ಜೆಜೆಎಂ ಹಗರಣ.
ಗ್ರಾಮದಲ್ಲಿನ ಅಕ್ರಮವಾಗಿರುವ ಮನೆಗಳಿಲ್ಲದ ಲೇ ಔಟ್‌ಗಳು ಸೇರಿದಂತೆ ಖಾಲಿ ಜಾಗಗಳಿಗೂ ಕನೆಕ್ಷನ್ ಕೊಡಲಾಗುತ್ತಿದೆ. ಇದಕ್ಕೆ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ದೂರಲಾಗಿದೆ.
ಈ ಬಗ್ಗೆ ಜಿಲ್ಲಾ ಪಂಚಾಯತಿ ಸಿಎಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮದ ಮಲ್ಲಪ್ಪ ಹಳಕಟ್ಟಿ ದೂರು ನೀಡಿ, ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.