ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಲು ನಾಯಕರಿಗಾಗಿ ಕಾಯುತ್ತಿದ್ದಾರೆ ಕೋನರೆಡ್ಡಿ…!
1 min readಬೆಳಗಾವಿ: ತಮ್ಮನ್ನ ಶಾಸಕರನ್ನಾಗಿ ಮಾಡಿದ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಸೇರುತ್ತಿರುವ ಜಾತ್ಯಾತೀತ ಜನತಾದಳದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರಿಗಾಗಿ ಕಾಯುತ್ತಿದ್ದಾರೆ.
ಇಂದು 4ಗಂಟೆಗೆ ಕಾಂಗ್ರೆಸ್ ಪಕ್ಷವನ್ನ ಸೇರುತ್ತಾರೆಂದು ಧಾರವಾಡ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರು ಮಾಹಿತಿ ನೀಡಿದ್ದರು. ಅದೇ ಪ್ರಕಾರ ಬೆಳಗಾವಿಯ ಕಚೇರಿಯಲ್ಲಿ ಕೋನರೆಡ್ಡಿಯವರು ಕಾಯುತ್ತಿದ್ದು, ಕಾಂಗ್ರೆಸ್ ನಾಯಕರು ಬರಬೇಕಿದೆ.
ಈಗಾಗಲೇ ಕಾಂಗ್ರೆಸ್ ಕಚೇರಿಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ವಿಜಯ ಕುಲಕರ್ಣಿ ಸೇರಿದ್ದಾರೆ. ನವಲಗುಂದ ಕ್ಷೇತ್ರದಿಂದ ಕೆಲವು ಕಾರ್ಯಕರ್ತರು ತೆರಳಿದ್ದಾರೆ.
ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ ಅಂಗಡಿ ಪಕ್ಷವನ್ನ ತೊರೆದು ಜೆಡಿಎಸ್ ಸೇರಿದ್ದಾರೆಂದು ಗೊತ್ತಾಗಿದೆ.