ಅಕ್ರಮ ಮರಳೂ.. ರೇಲ್ವೆ ಜೆಸಿಬಿಯೂ.. ಯುವಕನ ಸಾವೂ..
1 min readಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಕೂಪದಲ್ಲಿ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ಹುಬ್ಬಳ್ಳಿ ದೇಸಾಯಿ ಸರ್ಕಲ್ ಬಳಿಯೇ ನಡೆದಿದ್ದು, ರೇಲ್ವೆ ಠಾಣೆಯ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
ಅಕ್ರಮ ಮರಳು ಶೇಖರಣೆ ಮಾಡುವ ದೇಸಾಯಿ ಸರ್ಕಲ್ ಬಳಿಯ ಪ್ರದೇಶದಲ್ಲಿಯೇ ದುರ್ಘಟನೆ ನಡೆದಿದ್ದು, ದೇವರಾಜ ಬಂಡಿವಡ್ಡರ ಎಂಬ ಯುವಕನೇ ಸಾವಿಗೀಡಾಗಿದ್ದಾನೆ. ಮೇಲ್ನೋಟಕ್ಕೆ ಇದು ಬೇರೆಯದೇ ಘಟನೆ ಎಂದು ಹೇಳಲಾಗುತ್ತಿದೆಯಾದರೂ, ಅಸಲಿಯತ್ತು ಬೇರೆಯದ್ದೇ ಇದೆ.
ದೇಸಾಯಿ ಸರ್ಕಲ್ ಬಳಿಯ ಖಾಲಿ ಜಾಗದಲ್ಲಿ ಅಕ್ರಮವಾಗಿ ಮರಳನ್ನ ಸಂಗ್ರಹಣೆ ಮಾಡಲಾಗುತ್ತಿದೆ. ಅಲ್ಲಿಯೇ ಜೆಸಿಬಿಗಳನ್ನಿಟ್ಟು ಟಿಪ್ಪರಗಳಿಗೆ ತುಂಬಿಸಲಾಗುತ್ತದೆ. ರಾತ್ರಿ ಸಮಯದಲ್ಲಿಯೇ ಸಾಗಾಟ ಮಾಡುವುದನ್ನ ರೂಢಿಸಿಕೊಂಡಿರುವ ಚೋರರು, ಯುವಕನಿಗೆ ಜೆಸಿಬಿ ಬಡಿದಿರುವುದನ್ನ ಲೆಕ್ಕಿಸದೇ ತಮ್ಮದೇ ಕಾರ್ಯದಲ್ಲಿ ನಿರತರಾಗಿದ್ದರು.
ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ನೋಡಿದವರೇ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಿದರಾದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ.