ಬ್ರಿಟಿಷರ ವಿರುದ್ಧ ಹೋರಾಡಿದ ಮಠದ ಮೇಲು ಕೊರೋನಾ ಕಣ್ಣು..! ಸ್ವಾತಂತ್ರ್ಯ ಸೇನಾನಿಯ ಜಾತ್ರೆಯೇ ರದ್ದು.!
1 min readವಿಜಯಪುರ: ಕೊರೋನಾ ಹೆಮ್ಮಾರಿಯ ಕರಿಛಾಯೆ ಈಗ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜಾತ್ಯಾತೀತ ಇಂಚಗೇರಿ ಮಠದ ಮೇಲೂ ಬಿದ್ದಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಹೋರಾಡಿದ ಮಾಧವಾನಂದ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ರದ್ದು ಮಾಡಲಾಗಿದೆ. ಮಠದಲ್ಲಿ ಮೇ 31 ರಿಂದ ಜೂನ್ 2ರವರೆಗೆ ಮೂರು ದಿನಗಳವರೆಗೆ ನಡೆಯಬೇಕಿದ್ದ ಪುಣ್ಯಸ್ಮರಣೆ ಸಪ್ತಾಹ ರದ್ದುಗೊಳಿಸಲಾಗಿದೆ. ಪ್ರತಿ ವರ್ಷ ಮಾಧವಾನಂದ ಶ್ರೀಗಳ ಪುಣ್ಯ ಸ್ಮರಣೆಯನ್ನ ಸ್ವಾತಂತ್ರ್ಯ ಹೋರಾಟಗಾರನ ಜಾತ್ರೆ ಅಂತಲೇ ಆಚರಿಸಲಾಗುತ್ತಿತ್ತು. ಕರ್ನಾಟಕ, ಮಹಾರಾಷ್ಟ್ರ ಸೇರಿ ಒಂದು ಲಕ್ಷದವರೆಗು ಭಕ್ತರು ಸೇರುತ್ತಿದ್ದರು. ಆದ್ರೆ , ಸಧ್ಯ ಕೊರೋನಾ ಕಾಟದಿಂದಾಗಿ ಸ್ವಾತಂತ್ರ್ಯ ಹೋರಾಟಗಾರನ ಜಾತ್ರೆ ರದ್ದಾಗಿದೆ.
ಇನ್ನು ಎಲ್ಲೆಡೆ ಕೊರೋನಾ ರಣಕೇಕೆ ಹಾಕ್ತಿರೋದ್ರಿಂದ ಮಠದ ಭಕ್ತರು ಮನೆಯಲ್ಲೆ ನಿತ್ಯನೇಮ, ಭಜನೆ ನಡೆಸಬೇಕು. ಸರ್ಕಾರದ ಆದೇಶಗಳನ್ನ ಪಾಲಿಸಬೇಕು ಎಂದು ಇಂಚಗೇರಿ ಮಠದ ಪೀಠಾಧಿಕಾರಿ ರೇವಣಸಿದ್ದೇಶ್ವರ ಶ್ರೀಗಳು ತಿಳಿಸಿದ್ದಾರೆ. ಜೊತೆಗೆ ಮಠದ 50ಕ್ಕೂ ಅಧಿಕ ಶಾಖಾ ಮಠಗಳಲ್ಲಿ ನಡೆಯುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನ ರದ್ದುಗೊಳಿಸಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.