ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮಡದಿ: ದೇವಾಲಯಗಳಿಗೆ ಭೇಟಿ

ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮಡದಿ ಜಸೋದಾಬೆನ್ ಕರ್ನಾಟಕದ ವಿವಿಧ ಮಠ-ಮಾನ್ಯಗಳ ದರ್ಶನ ಪಡೆಯುತ್ತಿದ್ದು, ಇಂದು ಬೆಳಿಗ್ಗೆ ರಾಜನಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಆಶೀರ್ವಾದ ಪಡೆದರು.
ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಸೋದಾಬೆನ್ ಕಳೆದ ವಾರದಿಂದ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಕಾಣುತ್ತಿದ್ದಾರೆ. ಇಂದು ರಾಜನಕುಂಟೆಯ ದೇವಸ್ಥಾನದಲ್ಲಿ ಅವರನ್ನ ಕಂಡ ಭಕ್ತರು ಒಮ್ಮೆಗೆ ಅಚ್ಚರಿಗೊಂಡರು. ಇನ್ನೂ ಕೆಲವರು ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು.