ಚಿತ್ರನಟಿ ಜಯಪ್ರದಾ ಬಂಧನ..? ಜಾಮೀನು ರಹಿತ ವಾರೆಂಟ್

ಉತ್ತರಪ್ರದೇಶ: ಪ್ರಸಿದ್ಧ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಜಯಪ್ರದಾಗೆ ಕಳೆದ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ಉತ್ತರಪ್ರದೇಶದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
2019ರ ಲೋಕಸಭಾ ಚುನಾವಣೆಯ ವೇಳೆ ಜಯಪ್ರದಾ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಏಪ್ರೀಲ್ 20ರಂದು ವಿಚಾರಣೆ ನಡೆಯಲಿದೆ. ರಾಮಪುರ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಜಂಖಾನ ಜಯಪ್ರದಾರನ್ನ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದರು.