Posts Slider

Karnataka Voice

Latest Kannada News

ಕರ್ನಾಟಕ ಜಾನಪದ ವಿವಿಯ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

1 min read
Spread the love

ಗೊಟಗೋಡಿ-ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಕೇಂದ್ರಸ್ಥಾನದ ಹಾಗೂ ಪ್ರಾದೇಶಿಕ ಜಾನಪದ ಅಧ್ಯಯನ ಕೇಂದ್ರಗಳಲ್ಲಿನ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಎಂ.ಎ ಕೋರ್ಸ್: ಎಂ.ಎ ಕೋರ್ಸಗಳಾದ ಜಾನಪದ ವಿಜ್ಞಾನ, ಜನಪದ ಸಾಹಿತ್ಯ,  ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜನಪದ ಕಲೆ, ಕನ್ನಡ- ಜಾನಪದ, ಪ್ರವಾಸೋದ್ಯಮ, ಬುಡಕಟ್ಟು ಅಧ್ಯಯನ, ಗ್ರಾಮೀಣ- ಬುಡಕಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಹಿಳಾ ಅಧ್ಯಯನ, ಇಂಗ್ಲಿಷ್ (ಜಾನಪದ; ಅನುವಾದ ಅನುಲಕ್ಷಿಸಿ), ಅರ್ಥಶಾಸ್ತç(ಗ್ರಾಮೀಣ), ಸಮಾಜಶಾಸ್ತ (ಗ್ರಾಮೀಣ) ಎಂ.ಬಿ.ಎ ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ, ಪ್ರವಾಸೋದ್ಯಮ ; ಪ್ರವಾಸೋದ್ಯಮ ನಿರ್ವಹಣೆ,  ಎಂ.ಎಸ್ಸಿ ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಎಂ.ಪಿ.ಎ ಪ್ರದರ್ಶನ ಕಲೆ, ಎಂ.ವಿ.ಎ ದೃಶ್ಯ ಕಲೆ, ಎಂ.ಎಸ್.ಡಬ್ಲೂ ಸಮಾಜ ಕಾರ್ಯ (ಜನಪದ ; ಬುಡಕಟ್ಟು ಅಭಿವೃದ್ಧಿ ಅನುಲಕ್ಷಿಸಿ) ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಯುಜಿಸಿ ಅಂಗೀಕೃತ ಯಾವುದೇ ವಿಶ್ವವಿದ್ಯಾಲಯದ ಪದವಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಫಲಿತಾಂಶ ಪ್ರಕಟಣೆಯ ನಂತರ ಅಂಕಪಟ್ಟಿಗಳನ್ನು ಕೂಡಲೇ ಇಂಟರ್‌ನೆಟ್ ಮೂಲಕ ಪಡೆದು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸರ್ಟಿಫಿಕೇಟ್- ಡಿಪ್ಲೊಮಾ ಕೋರ್ಸ್: ಸಮರ ಕಲೆ, ಜನಪದ ಗೀತ ಸಂಪ್ರದಾಯ, ಕಸೂತಿ ಕಲೆ, ಜನಪದ ನೃತ್ಯ, ದೊಡ್ಡಾಟ, ಪ್ರವಾಸೋದ್ಯಮ, ತೊಗಲು ಗೊಂಬೆಯಾಟ, ಬಿದರಿ ಕಲೆ, ಬೀಸು ಕಂಸಾಳೆ ಮತ್ತು ಡೊಳ್ಳು ಕುಣಿತ ಸೇರಿದಂತೆ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ಗಳಾದ ಜನಪದ ಮಹಾಕಾವ್ಯ, ಪಾರಂಪರಿಕ ಹೈನುಗಾರಿಕೆ, ಪಾರಂಪರಿಕ ತೋಟಗಾರಿಕೆ ಹಾಗೂ ಡಿಪ್ಲೊಮಾ ಕೋರ್ಸ್ಗಳಾದ ಜಾನಪದ ಬಯಲಾಟ (ಮೂಡಲಪಾಯ), ಯಕ್ಷಗಾನ ಬಯಲಾಟ, ಪಾರಂಪರಿಕ ಸೌಂದರ್ಯ ಶಾಸ್ತ ಹಚ್ಚೆ, ಪಾರಂಪರಿಕ ಸಮರ ಕಲೆ, ಯೋಗ ಕೋರ್ಸಗಳಿಗೆ ಅರ್ಜಿಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ, ಅರ್ಜಿ ನಮೂನೆ, ಪ್ರವೇಶ ಶುಲ್ಕ ಹಾಗೂ ಇತರ ಮಾಹಿತಿಗಳನ್ನು ವಿಶ್ವವಿದ್ಯಾಲಯದ ವಿವರಣಾ ಪುಸ್ತಕದಿಂದ ಪಡೆಯಬಹುದು ಅಥವಾ ವಿಶ್ವವಿದ್ಯಾಲಯದ ವೆಬ್‌ಸೈಟ್  http://www.janapadauniversity.ac.in ನ್ನು ಸಂಪರ್ಕಿಸಬಹುದಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲೆಮಹದೇಶ್ವರ ಬೆಟ್ಟ, ಬೀದರ್, ಮಂಡ್ಯ ಮತ್ತು ಜೋಯಿಡಾ ಗಳಲ್ಲಿರುವ ಪ್ರಾದೇಶಿಕ ಜನಪದ ಕಲೆಗಳ ಕಲಿಕಾ ಕೇಂದ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಪ್ರವೇಶ ಬಯಸುವವರು ಸಂಬAಧಿಸಿದ ಅಧ್ಯಯನ ಕೇಂದ್ರಗಳಿಂದಲೂ ಅರ್ಜಿ ಪಡೆದು ಭರ್ತಿ ಮಾಡಿ ದೃಢೀಕರಿಸಿದ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ವಿಶ್ವವಿದ್ಯಾಲಯದ ಕಛೇರಿಗೆ ಭೇಟಿ ನೀಡಿ ವಿಚಾರಿಸಬಹುದು. ದೂರವಾಣಿ ಸಂಖ್ಯೆ: 6366266456, 9449233966, 9482810694ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *

You may have missed