ಜೈಲು ಪಾಲಾಗಿದ್ದ ಶಿವಳ್ಳಿ ಪಿಡಿಓಗೆ ಜಾಮೀನು

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಮೀನು ಎನ್ ಎ ಮಾಡಲು ಲಂಚ ಪಡೆಯುವಾಗ ಪತಿ ಸಮೇತ ಸಿಕ್ಕು ಬಿದ್ದು ಜೈಲುಪಾಲಾಗಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ಜಾಮೀನು ದೊರಕಿದೆ.
ಶಿವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಂಟರಪ್ರೈಜಿಸ್ ಭೂಮಿಯಲ್ಲಿ ಎನ್ ಎ ಮಾಡುವ ಸಂಬಂಧ ಸಾಗರ ಹೂಗಾರ ಎಂಬುವವರಿಂದ ಲಂಚ ಪಡೆಯುವಾಗ ಪತಿ ಮಹಾಂತೇಶ ಮೇದಾರ ಸಿಲುಕಿಕೊಂಡು, ಇದಕ್ಕೆ ಕಾರಣವಾದ ಪತ್ನಿ ಪಿಡಿಓ ಪುಷ್ಟಾ ಮೇದಾರ ಅವರನ್ನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ವಶಕ್ಕೆ ಪಡೆದಿದ್ದರು.
ಜನೇವರಿ 6ರಂದು ಘಟನೆ ನಡೆದಿದ್ದು, ಅಂದಿನಿಂದಲೇ ದಂಪತಿಗಳಿಬ್ಬರು ಧಾರವಾಡದ ಕಾರಾಗೃಹದ ಪಾಲಾಗಿದ್ದರು. ಇದೀಗ ನ್ಯಾಯಾಲಯದ ಮೂಲಕ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.
ಜನೇವರಿ 6 ರಂದು ತಾಲೂಕು ಕಚೇರಿ ಬಳಿ ಹುಬ್ಬಳ್ಳಿ ಮೂಲದ ಸಾಗರ ಹೂಗಾರ ಎಂಬುವವರಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.