ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ “ಜಗದೀಶ ಶೆಟ್ಟರ್” ಮಿಂಚಿನ ಸಂಚಾರ…

ಹುಬ್ಬಳ್ಳಿ: ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಂದು ಕುಂದಗೋಳ ತಾಲೂಕಿನಲ್ಲಿ ಮಿಂಚಿನ ಸಂಚಾರ ಆರಂಭಿಸಿದ್ದಾರೆ.
ಬಿಜೆಪಿಗೆ ಮರು ಸೇರ್ಪಡೆಯಾಗಿ ನಿನ್ನೆ ರಾತ್ರಿಯಷ್ಟೇ ಜಿಲ್ಲೆಯ ಎಲ್ಲ ನಾಯಕರು ಸಭೆ ನಡೆಸಿದ ಮರುದಿನವೇ ಪಕ್ಷ ಸಂಘಟನೆಗಾಗಿ ಗ್ರಾಮದತ್ತ ಜಗದೀಶ ಶೆಟ್ಟರ್ ಅವರು ಧುಮಿಕಿರುವುದು ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.
ಕುಂದಗೋಳ ತಾಲೂಕಿನ ಯುವ ನೇತಾರ ಡಾ.ಮಲ್ಲಿಕಾರ್ಜುನ ಬಾಳಿಕಾಯಿ ಅವರ ಮತ್ತಿಗಟ್ಟಿ ಗ್ರಾಮದ ನಿವಾಸಕ್ಕೆ ತೆರಳಿದಾಗ ನೂರಾರು ಕಾರ್ಯಕರ್ತರು ಜಮಾಯಿಸಿದ್ದಲ್ಲದೇ, ಬಿಜೆಪಿ ಗೆಲುವಿಗಾಗಿ ಹಗಲಿರುಳು ದುಡಿಯುವುದಾಗಿ ಘೋಷಣೆ ಕೂಗಿದರು.
ಮತ್ತಿಗಟ್ಟಿ ಗ್ರಾಮದ ಶಿವಾನಂದ ಮಠದ ಶ್ರೀ ಶಿವಬಸವ ಸ್ವಾಮೀಜಿ, ಡಾ.ಕ್ರಾಂತಿಕಿರಣ, ಮಲ್ಲಿಕಾರ್ಜುನ ಸಾವುಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.