ಶಿಕ್ಷಕರು.. ಮಾಜಿ ಸಿಎಂಗೆ ಮಾಡಿಕೊಂಡ ಮನವಿ ಏನು ಗೊತ್ತಾ…!
1 min readಹುಬ್ಬಳ್ಳಿ: ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆಯನ್ನ ಆರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿಯನ್ನ ಮಾಡಿಕೊಂಡರು.
ಮನವಿಯ ಮಾಡಿದ ನಂತರ ಅಶೋಕ ಸಜ್ಜನ ಹೇಳಿದ್ದೇನು..
ಹುಬ್ಬಳ್ಳಿಯಲ್ಲಿನ ನಿವಾಸಕ್ಕೆ ತೆರಳಿದ್ದ ಶಿಕ್ಷಕ ಸಂಘದವರು, ಸತತವಾಗಿ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ 72 ಸಾವಿರ ಶಿಕ್ಷಕರ ವರ್ಗಾವಣೆ ಶೀಘ್ರವಾಗಿ ಪ್ರಾರಂಭಿಸುವಂತೆ ಮನವಿ ಮಾಡಿದರು.
ಶಿಕ್ಷಕರ ಮನವಿಯನ್ನ ಸ್ವೀಕರಿಸಿದ ಸಚಿವ ಜಗದೀಶ ಶೆಟ್ಟರ ಅವರು, ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಮಾತನಾಡಿ, ಆದಷ್ಟು ಬೇಗನೇ ವರ್ಗಾವಣೆಯನ್ನ ಆರಂಭಿಸಲು ಸೂಚನೆ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದರು.
ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ ನೇತೃತ್ವದಲ್ಲಿ ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ, ಉಪಾಧ್ಯಕ್ಷ ಗೋವಿಂದ ಜುಜಾರೆ, ರಾಜ್ಯ ಸಹ ಕಾರ್ಯದರ್ಶಿ ರುದ್ರೇಶ್.ಎಂ.ಕುರ್ಲಿ, ಜಿಲ್ಲಾಧ್ಯಕ್ಷ ಅಕ್ಬರಲಿ ಸೊಲ್ಲಾಪೂರ, ಜಿಲ್ಲಾ ಪ್ರ.ಕಾ.ರಾಜೀವ್ ಸಿಂಗ್ ಹಲವಾಯಿ, ನವಲಗುಂದ ತಾಲೂಕ ಅಧ್ಯಕ್ಷ ಶಂಭುಲಿಂಗ ಹೊಳೆಯಣ್ಣವರ, ವಿವಿಧ ಹಂತದ ಪದಾಧಿಕಾರಿಗಳಾದ ಎ.ಐ.ಮುಳಗುಂದ, ಯಾದೂಸಾಬನವರ, ಶ್ರೀಧರ ಡಿ.ಟಿ, ಭಂಡಿವಡ್ಡರ, ಎಸ್.ಎಸ್.ಧನಿಗೊಂಡ, ಬಿ.ಜಿ.ಮುದಿಗೌಡ್ರ ಹಾಗೂ ವಿವಿಧ ಜಿಲ್ಲೆಗಳ ವರ್ಗಾವಣೆ ಅಪೇಕ್ಷಿತರು ಸಂಘದ ಅಭಿಮಾನಿಗಳು ಉಪಸ್ಥಿತರಿದ್ದರು.