“ಅಬ್ಬರಿಸಿ ಬೊಬ್ಬರಿದು ಗೆದ್ದು” ಶೆಟ್ಟರ್ ಮನೆಗೋಗಿ ಶುಭಾಶಯ ಕೋರಿದ ‘ಉಪಮೇಯರ್’…

ಹುಬ್ಬಳ್ಳಿ: ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಮೇಯರ್, ಉಪಮೇಯರ್ ಮಾಡಲು ಕಾಂಗ್ರೆಸ್ ಟಾಸ್ಕ್ ನೀಡಿದೆ. ಅದಕ್ಕಾಗಿ ನಾವೂ ಒಂದೇ ಎಂದು ತೋರಿಸಿ ಪ್ರಚಾರ ಪಡೆದು ಆಯ್ಕೆಯಾಗಿರುವ ಉಪಮೇಯರ್ ‘ನಾನು ನಿಮ್ಮ ಶಿಷ್ಯ’ ಎನ್ನುತ್ತ ಜಗದೀಶ ಶೆಟ್ಟರ ಅವರ ನಿವಾಸಕ್ಕೆ ಬಂದು ಶುಭಾಶಯ ಕೋರಿದ್ದಾರೆ.
ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪ ಮೇಯರ್ ಸತೀಶ ಹಾನಗಲ್ ಶುಭಾಶಯ ಕೋರಿದ್ದು, ಚರ್ಚೆಗೆ ಕಾರಣವಾಗಿದೆ.
MLCಯಾಗಿ ಆವಿರೋಧ ಆಯ್ಕೆಯಾಗಿರೋ ಜಗದೀಶ್ ಶೆಟ್ಟರ್ ಭೇಟಿಯಾದ ಉಪಮೇಯರ್ ಸತೀಶ ಹಾನಗಲ್, ನಾನು ನಿಮ್ಮ ಶಿಷ್ಯ ಎನ್ನುತ್ತಿದ್ದರು. ಈ ಸಮಯದಲ್ಲಿ ಸತೀಶ ಹೆಗಲ ಮೇಲೆ ಕೈಯಿಟ್ಟ ಶೆಟ್ಟರ್ ಅವರು ನಸುನಕ್ಕರು.
ಇದಾದ ನಂತರ ಲೋಕಸಭಾ ಮಾಜಿ ಸದಸ್ಯ ಐ.ಜಿ.ಸನದಿ ಸೇರಿದಂತೆ ಹಲವರು ನೂತನವಾಗಿ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿರುವ ಜಗದೀಶ ಶೆಟ್ಟರ್ ಅವರಿಗೆ ಶುಭಾಶಯ ತಿಳಿಸಿದರು.