ಜಾಹೀರಾತಿನಲ್ಲಷ್ಟೇ ಮಾಜಿ ಸಿಎಂ “JS”: ವೇದಿಕೆಯಲ್ಲಿ “NO Chair”…
1 min readರಾಷ್ಟ್ರಪತಿ ಕಾರ್ಯಕ್ರಮದ ಗಣ್ಯರ ಲಿಸ್ಟ್ ನಿಂದ ಜಗದೀಶ್ ಶೆಟ್ಟರ್ ಹೆಸರು ಔಟ್ :ವಿರೋಧಿ ಬಣದ ಮೆಲುಗೈ..?
ಮಹಾನಗರ ಪಾಲಿಕೆ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಭಾವಚಿತ್ರವನ್ನ ಹಾಕಲಾಗಿದೆ. ಆದ್ರೇ, ವೇದಿಕೆಯಲ್ಲಿ ಇಲ್ಲಾ..
ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದ್ರೆ ಕಾರ್ಯಕ್ರಮದ ಪರಶೀಲನೆ ನಡೆಸಿದ ಸೆಂಟ್ರಲ್ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಾನವೇ ಇಲ್ಲ.
ಹೌದು.. ಮಹಾನಗರ ಪಾಲಿಕೆ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಜೊತೆ ವೇದಿಕೆಯಲ್ಲಿ ಶೆಟ್ಟರ್ ಗೆ ಸ್ಥಾನವೇ ಇಲ್ಲವಾಗಿದೆ. ಶೆಟ್ಟರ್ ಅವರನ್ನ ವೇದಿಕೆಯಿಂದ ದೂರಿಟ್ಟು ರಾಷ್ಟ್ರಪತಿ ಕಾರ್ಯಕ್ರಮ ನಡೆಯಲಿದೆ.
ವೇದಿಕೆ ಮೇಲಿನ ಗಣ್ಯರ ಜೊತೆ ಶೆಟ್ಟರ್ ಗೆ ಇಲ್ಲ ಸ್ಥಾನ. ವೇದಿಕೆಯಲ್ಲಿ ಒಂಬತ್ತು ಗಣ್ಯರಿಗೆ ಅವಕಾಶ ನೀಡಲಾಗಿದೆ.
ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಅಶ್ವಥ್ ನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ,
ಬೈರತಿ ಬಸವರಾಜ, ಹಾಲಪ್ಪ ಆಚಾರ, ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ್ ಅಂಚಟಗೇರಿಗೇ ಮಾತ್ರ ವೇದಿಕೆ ಹತ್ತಲು ಅವಕಾಶ ನೀಡಲಾಗಿದೆ.
ಇದು ಜಗದೀಶ್ ಶೆಟ್ಟರ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ತಮ್ಮ ನಾಯಕ ಕೈಬಿಟ್ಟದಕ್ಕೆ ಪಕ್ಷದಲ್ಲಿ ಅಸಮಾಧಾನ ಉಂಟಾಗಿದ್ದು, ಕಾರ್ಯಕ್ರಮ ನಡೆಯುತ್ತಿರೋದು ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರದಲ್ಲಿ. ಶೆಟ್ಟರ್ ಹೆಸರು ಕೈಬಿಟ್ಟು ಅವಮಾನ ಮಾಡಲಾಗಿದೆ ಎಂದು ಅಸಮಾ಼ಧಾನಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರನ್ನು ಉದ್ದೇಶಪೂರ್ವಕವಾಗಿ ಬಿಟ್ರಾ ಎಂಬ ಅನುಮಾನವು ಇದೆ.
ರಾಷ್ಟ್ರಪತಿಗಳ ಕಾರ್ಯಕ್ರಮದ ಸಿದ್ದತೆಗೆ ಓಡಾಡುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ತಿಳಿಯದಂತೆ ವೇದಿಕೆ ಕಾರ್ಯಕ್ರಮದ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಮಾಯವಾಗಲು ಕಾಣದ ಕೈಗಳ ಕೈವಾಡವಿದೆ ಎಂದು ಅವರ ಆಪ್ತ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.