ಜಗದೀಶ ಶೆಟ್ಟರ ಬ್ಯಾನರನಲ್ಲಿ ಮಾತ್ರ: ‘ಇನ್ವಿಟೇಷನ್ ಕಾರ್ಡ್’ಲ್ಲಿ ನೋ…!!!

ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ತಾಳ್ಮೆಯನ್ನ ಪರೀಕ್ಷೆಗೊಡ್ಡುವ ಪ್ರಯತ್ನ ಧಾರವಾಡ ಜಿಲ್ಲೆಯ ಭಾರತೀಯ ಜನತಾ ಪಕ್ಷದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಅದಕ್ಕೆ ಮತ್ತೊಂದು ಕಾರ್ಯಕ್ರಮ ಸಾಕ್ಷಿ ನುಡಿಯುತ್ತಿದೆ.
ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಡೆದ ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದಲ್ಲೂ ಮಾಜಿ ಸಿಎಂ ಜಗದೀಶ ಶೆಟ್ಟರ ಅವರ ಹೆಸರನ್ನ ಕೈಬಿಡಲಾಗಿತ್ತು. ಈಗ ಧಾರವಾಡ ರೇಲ್ವೆ ನಿಲ್ದಾಣದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕೈ ಬಿಡಲಾಗಿದೆ.

ಸಜ್ಜನ ರಾಜಕಾರಣಿಯಾಗಿರುವ ಜಗದೀಶ ಶೆಟ್ಟರ ಅವರನ್ನ ಪದೇ ಪದೇ ಹೀಗೆ ಅಸಹನೀಯಗೊಳ್ಳುವಂತೆ ಮಾಡುತ್ತಿರುವುದರ ಹಿನ್ನೆಲೆ ಏನಿರಬಹುದೆಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಧಾರವಾಡ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈ ಮೂಲಕ ಗೊತ್ತಾಗುತ್ತಿದೆ ಅಂತಿದ್ದಾರೆ ರಾಜಕೀಯ ಪಂಡಿತರು.