ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಅವರೇ “ನಡು ರಸ್ತೆಯಲ್ಲಿ” ಹೀಗಾ ಪೊಲೀಸರನ್ನ ತೆಗಳೋದು…!!!?

ಹುಬ್ಬಳ್ಳಿ: ನಗರದಲ್ಲಿ ನಿರಂತರವಾಗಿ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಕೆಲವು ಸಲ ಸಣ್ಣಪುಟ್ಟ ಯಡವಟ್ಟುಗಳು ನಡೆಯೋದು ಸಹಜ. ಆದ್ರೇ, ಹಿರಿಯ ಅಧಿಕಾರಿಯಾದವರು ನಡು ಬೀದಿಯಲ್ಲಿ ತಮ್ಮ ಸಿಬ್ಬಂದಿಗೆ ಅಸಹ್ಯ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿಸುವಂತಹ ವೀಡಿಯೊಂದು ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೋವನ್ನ ಮೊದಲು ನೋಡಿ..
ಕೇಶ್ವಾಪುರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಅವರು, ಪ್ರತಿಭಟನೆಯ ಮಾಹಿತಿ ನೀಡಿಲ್ಲವೆಂದು ತಮಗಿಷ್ಟವಾದ ರೀತಿಯಲ್ಲಿ ಪೊಲೀಸರೋರ್ವರಿಗೆ ನಡು ರಸ್ತೆಯಲ್ಲಿ ಸಿಟ್ಟಾಗಿದ್ದರು. ನೂರಾರೂ ಜನರು ಮೂಕವಿಸ್ಮಿತರಾಗಿ ನೋಡಿ, ಪೊಲೀಸರ ಸ್ಥಿತಿಯನ್ನ ನೋಡಿ… ಅಯ್ಯೋ… ಹಣೆಬರಹವೇ ಎನ್ನುವಂತಿತ್ತು.
ಕೆಲವು ಇನ್ಸಪೆಕ್ಟರಗಳಿಗೆ ತಾವೂ ಮಾಡುತ್ತಿರುವುದೇ ಸರಿ ಮತ್ತೂ ಯಾವಾಗಲೂ ಸರಿ ಎಂಬ ಅಹಃ ಹೊಂದಿರ್ತಾರೆ. ಅದರಲ್ಲೂ ಮೇಲಾಧಿಕಾರಿಗಳ ಮೊಬೈಲ್ ರಿಂಗಣಿಸಿದರೇ ಸಾಕು, ಪತರುಗುಟ್ಟಿ ಅದನ್ನ ತಮ್ಮ ಕೆಳಗಿನ ಸಿಬ್ಬಂದಿಗಳ ಮೇಲೆ ತೋರಿಸ್ತಾರೆ. ಅವರು ಯಾರ್ ಮೇಲೆ ತೋರಿಸಿಕೊಳ್ಳಬೇಕು, ಹಾಗಾಗಿಯೇ ಪೊಲೀಸರ ಕುಟುಂಬಗಳಲ್ಲಿ ಆಗಾಗ ಜಗಳಗಳು ನಡೆಯುತ್ತವೆ.
ಇನ್ಸಪೆಕ್ಟರ್ ಜಗದೀಶ ಸರ್, ನೀವೂ ರಸ್ತೆಯಲ್ಲಿ ನಿಂತು “,ದನ ಕಾಯೋನೆ” ಅಂದ್ರಲ್ಲಾ. ಮುಂದಿದ್ದ ವ್ಯಕ್ತಿ ಖಾಕಿ ಹಾಕಿದ್ದನ್ನೂ ಮರೆತು ಬಿಟ್ರಾ…