ಇಟಿಗಟ್ಟಿ 11ಜನರ ದುರ್ಮರಣ, ರಾಜ್ಯ ಸರಕಾರದಿಂದ ವರದಿ ಕೇಳಿದ ಸುಪ್ರೀಂಕೋರ್ಟ್

ಧಾರವಾಡ: ಇತ್ತೀಚೆಗೆ ತಾಲೂಕಿನ ಇಟಿಗಟ್ಟಿ ಬಳಿಯ ಬೈಪಾಸ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 11 ಜನರು ಮೃತಪಟ್ಟ ಪ್ರಕರಣ ಹಾಗೂ ರಸ್ತೆ ಅಪಘಾತದ ಬಗ್ಗೆ ಸಮಗ್ರ ವರದಿಯನ್ನ ನೀಡುವಂತೆ ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಕಳೆದ ವಾರ ಜನೆವರಿ 15ರಂದು ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸುಮಾರು 11 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಘಟನೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಮೀಟಿ ಆನ್ ರೋಡ್ ಸೆಪ್ಟಿ ಅಪಘಾತದ ಕುರಿತು ವರದಿಯನ್ನು ಕೇಳಿದೆ.
ರಸ್ತೆ ಸುರಕ್ಷತೆ ಕುರಿತು ಸುಪ್ರೀಂ ಕೋರ್ಟ್ ಸಮಿತಿ ಧಾರವಾಡ ಅಪಘಾತದ ಕುರಿತು ವರದಿ ಕೋರಿದ್ದು, ಫೆಬ್ರವರಿ15 ರ ವರೆಗೆ ಗಡುವು ನೀಡಿದೆ. ಈ ಕುರಿತು ರಾಜ್ಯದ ಪ್ರಿನ್ಸಿಪಲ್ ಸೆಕ್ರೆಟರಿ ಟ್ರಾನ್ಸಪೋರ್ಟ್ ಡಿಪಾರ್ಟ್ಮೆಂಟ್ ಅವರಿಗೆ ನೋಟಿಸ್ ನೀಡಿದ್ದು, 33 ಕಿಲೊಮೀಟರ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ಅಪಘಾತಗಳ ಪ್ರಮಾಣವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಈಗ ವರದಿ ನೀಡುವಂತೆ ಕೋರಿದೆ.
ಈ ಬೈಪಾಸ್ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸಿದ್ದು. ಹತ್ತಾರು ಜನರು ಈ ಬೈಪಾಸ್ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಇದೀಗ ರಸ್ತೆ ಅಪಘಾತದ ಕುರಿತು ಸಮಗ್ರ ವರದಿ ಕೋರಿದ್ದು ಮುಂದಿನ ದಿನಗಳಲ್ಲಿ ಏನು ಕ್ರಮ ಕೈಗೊಳ್ಳಲಿದೆ ಅನ್ನೋದು ಕುತೂಹಲ ಮೂಡಿಸಿದೆ.