ಬೆಂಗಳೂರಲ್ಲಿ ನೊಂದವರಿಗೆ ಧೈರ್ಯ ತುಂಬಿದ “ಇಸ್ಮಾಯಿಲ ತಮಾಟಗಾರ”… ಸಹಾಯದ ಭರವಸೆ…
ಬೆಂಗಳೂರು: ಕೋಗಿಲೆ ಲೇ ಔಟ್ನಲ್ಲಿ ನಡೆದಿರುವ ಮನೆಗಳ ತೆರವು ಸ್ಥಳಕ್ಕೆ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಭೇಟಿ ನೀಡಿ, ನೊಂದವರಿಗೆ ಆತ್ಮ ಸ್ಥೈರ್ಯ ತುಂಬಿದರು.
ನೂರಾರೂ ಮನೆಗಳನ್ನ ತೆರವು ಮಾಡಿದ್ದರಿಂದ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ತಮಾಟಗಾರ ಅವರು, ಸ್ಥಳೀಯರ ನೋವಿಗೆ ಸ್ಪಂದಿಸುವ ಭರವಸೆ ನೀಡಿದರು.
ತಮ್ಮಿಂದ ಆದ ಸಹಾಯ ಮಾಡುವ ಜೊತೆಗೆ ಸಂಬಂಧಿಸಿದ ಪ್ರಮುಖರೊಂದಿಗೆ ಮಾತನಾಡುವ ಭರವಸೆಯನ್ನ ಸ್ಥಳೀಯರಿಗೆ ನೀಡಿದರು.
