ಹೌದು… ನನ್ನ ಹತ್ಯೆಗೆ ‘ಸಮಾಜದ’ ಯುವಕರನ್ನೇ ಬಿಟ್ಟಿದ್ದಾರೆ: ಇಸ್ಮಾಯಿಲ್ ತಮಾಟಗಾರ ಸ್ಪೋಟಕ ಹೇಳಿಕೆ… Exclusive Video…

ಧಾರವಾಡ: ನನ್ನ ಹತ್ಯೆಯನ್ನ ಮಾಡಲು ನಮ್ಮ ಸಮಾಜದ ಬಡವರ ಮಕ್ಕಳನ್ನ ರೆಡಿ ಮಾಡಿ ಬಿಟ್ಟಿದ್ದು, ಈ ಬಗ್ಗೆ ಪೊಲೀಸರು ಸಮಗ್ರ ಮಾಹಿತಿಯನ್ನ ತನಿಖೆಯ ಮೂಲಕ ಹೊರಗೆ ಹಾಕಬೇಕೆಂದು ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಸ್ಪೋಟಕ ಮಾಹಿತಿಯನ್ನ ಹೊರಹಾಕಿದರು.
ಬೆಂಗಳೂರಿಗೆ ಹೊರಟಿದ್ದ ಅವರು ನಿನ್ನೆ ರಾತ್ರಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಮರಳಿ ಬಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಕ್ಸಕ್ಲೂಸಿವ್ ವೀಡಿಯೋ…
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶವೂ ಇರಬಹುದು. ನನ್ನ ಬಳಿ ಹಲವು ದಾಖಲೆಗಳಿವೆ. ಮೊದಲು ಪೊಲೀಸರು ತನಿಖೆ ನಡೆಸಿ, ಸತ್ಯವನ್ನ ಹೊರ ಹಾಕಲಿ. ಅವರು ನಿಜವಾದ ಮಾಹಿತಿ ಕೊಡದಿದ್ದರೇ, ದಾಖಲೆಯ ಸಮೇತ ಮಾಧ್ಯಮಗಳ ಮುಂದೆ ಬರುವುದಾಗಿ ಹೇಳಿದರು.