ಧಾರವಾಡ-71ಕ್ಕೆ ಇಸ್ಮಾಯಿಲ್ ತಮಾಟಗಾರ: ಸಮಾಜದ ಒಕ್ಕೊರಲ ಧ್ವನಿ..
1 min readಧಾರವಾಡ: ವಿಧಾನಸಭಾ ಚುನಾವಣೆಗೆ ಒಂದೇ ಒಂದು ವರ್ಷ ಬಾಕಿಯಿರುವ ಸಮಯದಲ್ಲಿಯೇ ಧಾರವಾಡ-71ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದು, ಮುಸ್ಲಿಂ ಸಮಾಜ ತನ್ನ ಶಕ್ತಿಯನ್ನ ಪ್ರದರ್ಶನ ಮಾಡುವ ಜೊತೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇಸ್ಮಾಯಿಲ್ ತಮಾಟಗಾರರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡರು.
ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಮೀರ ಅಹ್ಮದ ಖಾನ ಭಾಗವಹಿಸಿದ್ದರು. ಈ ಸಮಯದಲ್ಲಿ ಸಮಾಜದ ಮುಖಂಡರು ಮಾಡಿಕೊಂಡ ಮನವಿಯ ಬಗ್ಗೆ ಸ್ವತಃ ಇಸ್ಮಾಯಿಲ ತಮಾಟಗಾರ ಮಾತನಾಡಿದ್ದು ಇಲ್ಲಿದೆ ನೋಡಿ..
ಈ ಬಗ್ಗೆ ಸೂಕ್ತವಾಗಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಮಾತನಾಡಿದರು. ಸಮಾಜದ ಒಳತಿಗಾಗಿ ಜನರು ಬಯಸಿದ್ದಲ್ಲಿ ಇಸ್ಮಾಯಿಲ ತಮಾಟಗಾರಗೆ ಟಿಕೆಟ್ ನೀಡಬೇಕೆಂದು ಹೇಳಿದರು.
ಇದೇ ಸಮಯದಲ್ಲಿ ಅಂಜುಮನ್ ಸಂಸ್ಥೆಯ ವತಿಯಿಂದ ಮನವಿಯನ್ನ ನೀಡಲಾಯಿತು. ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು. ಅವರ ನಿವಾಸ ಕೂಡಾ ಅಲ್ಲೇ ಇದೆ. ಧಾರವಾಡ-71 ಕ್ಷೇತ್ರಕ್ಕೆ ಇಸ್ಮಾಯಿಲ ತಮಾಟಗಾರಗೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಸ್ವತಃ ಜಮೀರ ಅಹ್ಮದ ಮಾತನಾಡಿ, ಜನರ ಆಶೋತ್ತರಗಳನ್ನ ಕೆಪಿಸಿಸಿ ಮುಖಂಡರಿಗೆ ತಲುಪಿಸುತ್ತೇವೆ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಗ್ರಾಮಾಂತರ ಕ್ಷೇತ್ರದಿಂದ ನಗರ ಕ್ಷೇತ್ರಕ್ಕೆ ವರ್ಗಾವಣೆ ಮಾಡುವಂತೆ ಅಂಜುಮನ್ ಸಂಸ್ಥೆ, ಮಸೀದಿಗಳ ಮುತುವಲ್ಲಿಯವರು ಮನವಿ ಸಲ್ಲಿಸಿದ್ದಾರೆ. ಇದೆಲ್ಲವನ್ನು ನೋಡಿದಾಗ ವಿನಯ್ ಕುಲಕರ್ಣಿಯವ ಬಗ್ಗೆ ಮುಸ್ಲಿಂ ಸಮುದಾಯವು ಸಂತೋಷವಾಗಿಲ್ಲ ಮತ್ತು ಇದು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಹೇಳಲಾಗುತ್ತಿದೆ.