ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲೇ ಹೋರಾಟಕ್ಕೆ ಸಿದ್ಧತೆ: ತವರೂರಿನ ಗ್ರಾಮ ಪಂಚಾಯತಿಗಳ ಆಕ್ರೋಶ
1 min readಶಿವಮೊಗ್ಗ: ಗ್ರಾಮ ಪಂಚಾಯತಿ ಚುನಾವಣೆಯನ್ನ ಆರು ತಿಂಗಳು ಮುಂದೂಡಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ.
ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿದ್ದು, ಹೊಸ ಆಡಳಿತ ಸಮಿತಿ ರಚನೆಗೆ ವಿರೋಧ ಕೇಳಿ ಬರುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಂದ ವಿರೋಧ, ಹೊಸ ಆಡಳಿತ ಸಮಿತಿ ಬೇಡವೇ ಬೇಡ ಎನ್ನಲಾಗುತ್ತಿದೆ. ನಮ್ಮನೇ ಮುಂದುವರೆಸಿ ಇಲ್ಲವೇ ಚುನಾವಣೆ ನಡೆಸಿ ಎಂದು ಒತ್ತಾಯಿಸಿದ್ದಾರೆ.
ಕೋವಿಡ್ 19 ಸಂಬಂಧಿಸಿದಂತೆ ಕೆಲಸ ಮಾಡಿದ್ದು ನಾವು. ರಾಜ್ಯದ ಯಾವುದೇ ಸಚಿವರು ನಾಯಕರು ಬಂದು ಇಲ್ಲಿ ಕೆಲಸ ಮಾಡಿಲ್ಲ. ಇದನ್ನೇ ಮುಂದೆ ಇಟ್ಟುಕೊಂಡು ರಾಜಕೀಯ ಮಾಡಬೇಡಿ. ಜಿಲ್ಲೆಯ 271 ಗ್ರಾಮ ಪಂಚಾಯತಿಗಳು ಹೋರಾಟಕ್ಕೆ ಸಿದ್ದವಾಗುತ್ತಿವೆ ಎಂದು ಎಚ್ಚರಿಸಿದ್ದಾರೆ.
ಹೊಸ ಆಡಳಿತ ಸಮಿತಿ ವಿಚಾರವನ್ನು ಕೈ ಬಿಡಿ, ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ 6021 ಗ್ರಾಮ ಪಂಚಾಯತಿಯಲ್ಲೂ ಹೋರಾಟ ಮಾಡುತ್ತೇವೆ. ಇದು ಬಿಜೆಪಿಯ ಹೊಸ ತಂತ್ರ, ಗ್ರಾಮ ಪಂಚಾಯತಿಯಲ್ಲಿ ತಮ್ಮ ಬೆಂಬಲಿತರನ್ನು ನಿಲ್ಲಿಸುವ ಹುನ್ನಾರ. ಅಧಿಕಾರ ಚುಕ್ಕಾಣಿ ಹಿಡಿಯಲು, ಹಾಗೂ ನಮ್ಮ ಅಧಿಕಾರವನ್ನು ಮೊಟಕುಗೊಳಿಸಿಸಲು ಹುನ್ನಾರ ನಡೆಸುತ್ತಿದೆ ಎಂದು ದೂರಲಾಗಿದೆ.