ಸಣ್ಣ ನೀರಾವರಿ ‘ಲಾಕರ್’ಲ್ಲಿ ಸಿಕ್ಕಿದ್ದು ಬರೋಬ್ಬರಿ 56 ಲಕ್ಷ ರೊಕ್ಕಾ, 400ಗ್ರಾಂ ಬಂಗಾರ್…!
1 min readಹುಬ್ಬಳ್ಳಿ: ಕಳೆದ ಒಂದು ವರ್ಷದಿಂದ ಯಾವುದೇ ಪೋಸ್ಟಿಂಗ್ ಇಲ್ಲದೇ ಇದ್ದರೂ ಸಣ್ಣ ನೀರಾವರಿ ಇಲಾಖೆಯ ಎಕ್ಸಕ್ಯುಟಿವ್ ಇಂಜಿನಿಯರ್ ಬ್ಯಾಂಕಿನ ಲಾಕರ್ ನಲ್ಲಿ ಬರೋಬ್ಬರಿ 56 ಲಕ್ಷ ರೂಪಾಯಿ ಹಾಗೂ ಅರ್ಧ ಕೆಜಿಗೆ 100 ಗ್ರಾಂ ಕಡಿಮೆ ಚಿನ್ನ ದೊರಕಿದೆ.
ಹುಬ್ಬಳ್ಳಿಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಕೆ. ಶಿಗ್ಗಾಂವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿ, ಆದಾಯಕ್ಕಿತ ಹೆಚ್ವಿನ ಚರ-ಚಿರಾಸ್ತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದರು.
ದೇವರಾಜ ಅವರ ಅಕ್ಷಯ ಪಾರ್ಕ್ ಬಳಿಯ ರಾಜೀವಗಾಂಧಿ ನಗರ ನಿವಾಸ ಹಾಗೂ ಇವರ ತಾಯಿಯ ಗೋಕುಲ ರಸ್ತೆ ಕೋಟಿಲಿಂಗನಗರ ಹಾಗೂ ಇವರ ಮಾವನ ಬೆಂಗೇಇ ಬಳಿಯ ಬಾಲಾಜಿ ನಗರದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದರು.
ತದನಂತರ ಖಾಸಗಿ ಬ್ಯಾಂಕಿನಲ್ಲಿದ್ದ ಲಾಕರ್ ತೆಗೆಯಲು ದೇವರಾಜ ಶಿಗ್ಗಾಂವಿ ಅವರನ್ನ ಕರೆದುಕೊಂಡು ಹೋಗಿದ್ದ ಎಸಿಬಿ ಅಧಿಕಾರಿಗಳಿಗೆ ಶಾಕ್ ಎದುರಾಗಿದ್ದು, ಬರೋಬ್ಬರಿ 56 ಲಕ್ಷ ರೂಪಾಯಿ ಹಾಗೂ 400 ಗ್ರಾಂ ಚಿನ್ನ ಲಭಿಸಿದೆ.
ಧಾರವಾಡದಲ್ಲಿದ್ದ ದೇವರಾಜ ಶಿಗ್ಗಾಂವಿ ಅವರು ವರ್ಗಾವಣೆಯಾದ ಮೇಲೆ ಅವರಿಗೆ ಯಾವುದೇ ಸ್ಥಳವನ್ನ ತೋರಿಸಿಲ್ಲವಾದರೂ, ಇಷ್ಟೊಂದು ಪ್ರಮಾಣದ ಹಣ ಎಲ್ಲಿಂದ ಬಂತು ಎಂಬುದನ್ನ ಪತ್ತೆ ಹಚ್ಚಬೇಕಿದೆ.