Posts Slider

Karnataka Voice

Latest Kannada News

ಇರ್ಫಾನ್ ಶೂಟ್ ಮಾಡಿದ್ದು ಯುವಕರಲ್ಲ: ಮಾಮಾ-55, ನಿಲೇಶ-44: ಅರೆಸ್ಟ್ ಆದವರೆಂತವರು..?

Spread the love

ಹುಬ್ಬಳ್ಳಿ: ಪ್ರೂಟ್ ಇರ್ಫಾನ್ ಶೂಟ್ ಮಾಡಿ ಹೋದವರು ಯುವಕರಲ್ಲ. ಅವರಾಗಲೇ 50ವರ್ಷವನ್ನ ದಾಟಿದವರೇ ಆಗಿದ್ದಾರೆ. ಬಂಧನ ಮಾಡುವವರೆಗೂ ಪೊಲೀಸರಿಗೂ ಈ ಮಾಹಿತಿ ಗೊತ್ತಿರಲಿಲ್ಲವಂತೆ ಎಂದು ಖಚಿತ ಮೂಲಗಳು ತಿಳಿಸಿವೆ.

ಬಾಂಬೆಯ ನೆಹರುನಗರದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಹಾಗೂ ಪ್ರಕರಣದ ಪ್ರಮುಖ ರೂವಾರಿ (ಹ್ಯಾಂಡ್ಲರ್) ಕೂಡಾ ಪೊಲೀಸರ ಬಲೆಯಲ್ಲಿರೋದನ್ನ ಮೂಲಗಳು ಖಚಿತ ಪಡಿಸಿವೆ.

ಸುಫಾರಿ ಪಡೆದವರಿಂದ ಹ್ಯಾಂಡ್ಲರ್ ಕೆಲಸ ಮಾಡಿದ್ದ ರಾಜೇದ್ರಸಿಂಗ್ ಮೋಹನಸಿಂಗ್ ರಾವುತ್ ಅಲಿಯಾಸ್ ರಾಜು ನೇಪಾಳಿ, ತನ್ನ ಕಾಂಟ್ಯಾಕ್ಟನಲ್ಲಿದ್ದ ಮೂವರಿಗೆ ಸುಫಾರಿಯನ್ನ ಕೊಟ್ಟಿದ್ದ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾಮಾ ಎಂಬ 55 ವಯಸ್ಸಿನ ನಟೋರಿಯಸ್ ಕಿಲ್ಲರ್. ಇವನಿಗೆ ಇನ್ನೂ ಮೂವರು ಸಾಥ್ ನೀಡಿದ್ದು, ಅವರಲ್ಲಿಬ್ಬರನ್ನ ಪೊಲೀಸರ ಬಂಧಿಸಿ ಕರೆತರುತ್ತಿದ್ದಾರೆ.

ಮೂವರು ಬಂಧನವಾಗಿರುವ ಪ್ರದೇಶಗಳು ಬೇರೆ ಬೇರೆಗಳಲ್ಲಿ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ಪ್ರೂಟ್ ಇರ್ಫಾನ್ ಕೊಲೆ ಮಾಡಿದ ನಂತರವೂ ಮೂವರು ಅರಾಮಾಗಿ ದಿನಗಳನ್ನ ನೂಕುತ್ತಿದ್ದರು. ಇಷ್ಟು ಬೇಗನೇ ಪೊಲೀಸರು ತಮ್ಮನ್ನ ತಲುಪಬಹುದೆಂಬ ಕಲ್ಪನೆ ಆರೋಪಿಗಳಲ್ಲಿ ಇರಲಿಲ್ಲವೆನ್ನಲಾಗಿದೆ.

ಸಿಸಿಟಿವಿಯಲ್ಲಿ ಕಂಡು ಬಂದ ದೃಶ್ಯಗಳನ್ನ ನೋಡಿದಾಗ ಯುವಕರೇ ಮಾಡಿದ್ದಾರೆಂಬ ಕಲ್ಪನೆ ಮೂಡುತ್ತಿತ್ತು. ಆದರೆ, ಶೂಟರ್ಸ್ ಗಳು ಹಾಗೇ ಕಾಣುತ್ತಿದ್ದರಷ್ಟೇ ಎಂಬುದು ಈಗ ಗೊತ್ತಾಗಿದೆಯಷ್ಟೇ..


Spread the love

Leave a Reply

Your email address will not be published. Required fields are marked *