ಪ್ರೂಟ್ ಹತ್ಯೆ- ರಾಜಕಾರಣಿ ಸಂಬಂಧಿಯ ಪ್ರಮುಖ ಪಾತ್ರ: ಬುಲೆಟ್-ಡಿಯೋ ಚಲಾಯಿಸಿದ್ದು ಯಾರು ಗೊತ್ತಾ..?
ಹುಬ್ಬಳ್ಳಿ: ರೌಡಿಷೀಟರ್ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹತ್ಯೆ ನಡೆದ ಸಮಯದಲ್ಲಿ ಬುಲೆಟ್ ಮತ್ತು ಡಿಯೋ ಚಲಾಯಿಸುತ್ತಿದ್ದು 23 ರಿಂದ 25ವರ್ಷದೊಳಗಿನ ಯುವಕರು ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆಯಂತೆ.
ಧಾರವಾಡ ಮೂಲದ ರಾಜಕಾರಣಿಯ ಸಂಬಂಧಿಯಾಗಿರುವ ಯುವಕನೇ ಬುಲೆಟ್ ಚಲಾಯಿಸುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ಅದನ್ನ ಆತ ಪಡೆದುಕೊಂಡಿದ್ದ ಎನ್ನುವುದು ಗೊತ್ತಾಗಿದೆ. ಇದೇ ಯುವಕ ಆ ರಾಜಕಾರಣಿಯ ಬಳಿ ಅಕೌಂಟ್ ನೋಡಿಕೊಳ್ಳಲು ಇರುತ್ತಿದ್ದ ಎನ್ನುವುದು ಕೂಡಾ ತನಿಖೆಯಲ್ಲಿ ಗೊತ್ತಾಗಿದೆಯಂತೆ.
ಡಿಯೋ ಗಾಡಿ ಹೊಡೆಯುತ್ತಿದ್ದವನು ಕೂಡಾ ಪತ್ತೆಯಾಗಿದ್ದು, ಆತನೂ ಕೂಡ ಧಾರವಾಡದ ಪ್ರಮುಖ ಸ್ಥಳದ ಯುವಕನೇ ಆಗಿದ್ದಾನಂತೆ. ಕೊಲೆ ಪ್ರಕರಣದಲ್ಲಿ ಕೆಲವು ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆನ್ನುವುದು ಈಗಿರುವ ಸುದ್ದಿ.
ಪ್ರೂಟ್ ಇರ್ಫಾನ್ ಸಂಬಂಧವಾಗಿ ಯಾವುದನ್ನೂ ಹೊರ ಹಾಕದ ಪೊಲೀಸರು ನಾಲ್ಕು ದಿನವಾದರೂ ಒಂದೇ ಒಂದು ಮಾಹಿತಿಯನ್ನ ಹೊರ ಹಾಕಿಲ್ಲ. ಆದರೆ, ಕೊಲೆಯಲ್ಲಿ ಪ್ರಮುಖ ಪಾತ್ರವಾಗಿರುವ ದ್ವಿಚಕ್ರ ವಾಹನಗಳು ಮತ್ತೂ ಎಕ್ಸಯುವಿ ರೀತಿಯ ವಾಹನದ ಮಾಹಿತಿಯನ್ನೂ ಕಲೆ ಹಾಕಿದ್ದಾರಂತೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಈ ಬಗ್ಗೆ ಮಾಹಿತಿಯನ್ನ ಕೊಡಬೇಕಿದೆ. ಕೊಲೆ ನಡೆದು ಇಷ್ಟು ದಿನವಾದರೂ ಕೊಲೆಗೆಡುಕರ ಬಗ್ಗೆ ಮಾಹಿತಿ ಹೊರಗೆ ಬರದಿರುವುದು ಕೂಡಾ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.