ಪ್ರೂಟ್ ಇರ್ಫಾನ್ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲೇ: ಧಾರವಾಡಕ್ಕೆ ಬರೋದಿಲ್ಲ ಸೈಯದ್ ಇರ್ಫಾನ್ ಶವ
ಹುಬ್ಬಳ್ಳಿ: ನಿನ್ನೆಯಷ್ಟೇ ಗುಂಡೇಟಿನಿಂದ ತೀವ್ರ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟ ಸೈಯದ್ ಇರ್ಫಾನ್ ಅಲಿಯಾಸ್ ಪ್ರೂಟ್ ಇರ್ಫಾನ ಅಂತ್ಯಕ್ರಿಯೆ ಹುಬ್ಬಳ್ಳಿಯ ಚೆನ್ನಪೇಟೆ ಖಬರಸ್ಥಾನದಲ್ಲಿ ಮಾಡಲು ತೀರ್ಮಾನಿಸಲಾಗಿದೆ.
ಪ್ರೂಟ್ ಇರ್ಫಾನ್ ಶವವನ್ನ ಧಾರವಾಡಕ್ಕೆ ತರಬೇಕೆಂದು ಕೆಲವರು ಯೋಚನೆ ಮಾಡಿದ್ದರಾದರೂ ವೈಧ್ಯರ ಆಲೋಚನೆಯ ಬಗ್ಗೆ ಪೊಲೀಸರು ಸಂಬಂಧಿಕರಿಗೆ ಕೋರಿಕೊಂಡರು.
ಕೆಲವು ಕಾಲ ಮಾತುಕತೆ ನಡೆದ ನಂತರ ಹುಬ್ಬಳ್ಳಿಯಲ್ಲೇ ಅಂತ್ಯಕ್ರಿಯೆ ಮಾಡಲು ಎಲ್ಲರೂ ಒಪ್ಪಿಕೊಂಡಿದ್ದು, ಇನ್ನೂ ಕೆಲವೇ ಸಮಯದಲ್ಲಿ ಕಿಮ್ಸ್ ನಿಂದ ಶವ ಹೊರಡಲಿದೆ.
ಕೆಲವರಿಗೆ ಶವ ನೋಡಲು ಅವಕಾಶ ಮಾಡಿಕೊಡಲಾಗಿದ್ದು, ಇನ್ನುಳಿದಂತೆ ಬಿಗಿ ಪೊಲೀಸ್ ಪಹರೆಯನ್ನ ಆಯೋಜನೆ ಮಾಡಲಾಗಿದೆ. ಈ ಸಂಬಂಧ ಅಂಜುಮನ್ ಸಂಸ್ಥೆಯು ಕೂಡಾ ಅವಕಾಶ ನೀಡಿದ್ದು, ಯಾವುದೇ ತೊಂದರೆಯಿಲ್ಲದೇ ಅಂತ್ಯಕ್ರಿಯೆ ನಡೆಯಲಿದೆ.