ಧಾರವಾಡದಲ್ಲಿ ಇರಾಣಿ ಗ್ಯಾಂಗ್ ಬಂಧನ- ಬೈಕ್, ಬಂಗಾರ, ಮೊಬೈಲ್ ವಶ
1 min readಧಾರವಾಡ: ನಗರದಲ್ಲಿ ಜನರಿಗೆ ಆತಂಕ ಮೂಡಿಸಿದ್ದ ಇರಾಣಿ ಗ್ಯಾಂಗಿನ ಮೂವರನ್ನ ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸ್ ಆಯುಕ್ತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಿದ್ದಾರೆ.
ಇರಾಣಿ ಗ್ಯಾಂಗಿನ ಮಹಾರಾಷ್ಟ್ರ ಪರ್ಲಿ ರಸ್ತೆಯ ಅಲಿರಾ ಶೇಖಬೇಗ ಇರಾಣಿ, ಬೀದರ ಚಿದ್ರಿ ರಸ್ತೆಯ ಬಿಲಾಲ ಸರ್ತಾಜ ಇರಾಣಿ ಹಾಗೂ ಮಧ್ಯಪ್ರದೇಶ ಭೂಪಾಲನ ಗುಲಾಮಅಲಿ ಮಿರ್ಜಾಯೂಸುಫಅಲಿ ಇರಾಣಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರು ನಗರದಲ್ಲಿ ತಮ್ಮ ಕೈಚಳಕದಿಂದ ದೋಚುತ್ತಿದ್ದರು.
ಬಂಧಿತ ಆರೋಪಿಗಳಿಂದ ಕೆಟಿಎಂ ಡ್ಯೂಕ್ ಬೈಕ್, 13 ಗ್ರಾಂ 190 ಮಿಲಿ ಗ್ರಾಂ ಬಂಗಾರ ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಇವೆಲ್ಲದರ ಮೌಲ್ಯ 144440 ರೂಪಾಯಿ ಎಂದು ಅಂದಾಜಿಸಲಾಗಿದೆ.
ಇನ್ಸಪೆಕ್ಟರ್ ಎಂ.ಕೆ.ಬಸಾಪೂರ ರಚಿಸಿದ ತಂಡದಲ್ಲಿದ್ದ ಪಿಎಸ್ಐ ಸಚಿನಕುಮಾರ ದಾಸರೆಡ್ಡಿ, ಎಸ್.ಆರ್.ತೇಗೂರ, ಎಎಸ್ಐ ಬಿ.ಎಂ.ಅಂಗಡಿ, ಸಿಬ್ಬಂದಿಗಳಾದ ಎ.ಬಿ.ನರೇಂದ್ರ, ಎಂ.ಎಫ್.ನದಾಫ, ಐ.ಪಿ.ಬುರ್ಜಿ, ಆರ್.ಕೆ.ಅತ್ತಾರ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ, ಎಂ.ಜಿ.ಪಾಟೀಲ, ಡಿ.ಎಸ್.ಸಾಂಗ್ಲಿಕರ, ಎ.ಎಂ.ಹುಯಿಲಗೋಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.