ಸಿಬಿಐಗೆ ದಕ್ಷ ಅಧಿಕಾರಿ “ಪಿ.ಕೃಷ್ಣಕಾಂತ” ನೇಮಕ- ಅಧಿಕೃತ ಆದೇಶ ಹೊರಕ್ಕೆ….
1 min readಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗಿಯೂ ಧಾರವಾಡ ಜಿಲ್ಲೆಯ ಎಸ್ಪಿಯಾಗಿಯು ಕರ್ತವ್ಯ ನಿರ್ವಹಿಸಿದ್ದ ಖಡಕ್ ಅಧಿಕಾರಿ
ಬೆಂಗಳೂರು: ಕೇಂದ್ರೀಯ ತನಿಖಾ ದಳದ (ಸಿಬಿಐ) ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ನಾಟಕದ ಐಪಿಎಸ್ ಅಧಿಕಾರಿ ನೇಮಕಗೊಂಡಿದ್ದಾರೆ.
ಆಂಧ್ರಪ್ರದೇಶ ಮೂಲದ ಪಿ ಕೃಷ್ಣಕಾಂತ್ ಅವರನ್ನು ಐದು ವರ್ಷಗಳ ಅವಧಿಗೆ, ‘ಉದ್ದೇಶಿತ ದಿನಾಂಕದಿಂದ ಮುಂದಿನ ಆದೇಶದವರೆಗೆ’ ಸಿಬಿಐ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಸೋಮವಾರ ಹೊರಡಿಸಿದ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಕೃಷ್ಣಕಾಂತ್ ಅವರು ಮೊದಲು ಭಾರತೀಯ ಕಂದಾಯ ಸೇವೆ (ಐಆರ್‌ಎಸ್)- 2014ರ ಬ್ಯಾಚ್‌ನವರಾಗಿದ್ದರು ಮತ್ತು ಹೈದರಾಬಾದ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ನಂತರ 2016ರ ಐಪಿಎಸ್ ಬ್ಯಾಚ್‌ಗೆ ಆಯ್ಕೆಯಾಗಿದ್ದರು.
ಕೃಷ್ಣಕಾಂತ್ ಅವರು ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‌ಪಿ), ಧಾರವಾಡದ ಎಸ್‌ಪಿ ಮತ್ತು ಬೆಂಗಳೂರು ದಕ್ಷಿಣದ ಡಿಸಿಪಿಯಾಗಿ ಸೇವೆ ಸಲ್ಲಿಸುವ ಮೊದಲು ಹುಬ್ಬಳ್ಳಿ-ಧಾರವಾಡದಲ್ಲಿ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಸೇವೆ ಸಲ್ಲಿಸಿದ್ದಾರೆ. ಅವರು ರಾಜ್ಯದ ಅಪರಾಧ ತನಿಖಾ ಇಲಾಖೆಯಲ್ಲಿ (ಸಿಐಡಿ) ಎಸ್‌ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಷ್ಣಕಾಂತ್ ಅವರಲ್ಲದೆ, ಜಾರ್ಖಂಡ್ ಕೇಡರ್‌ನ 2015ರ ಬ್ಯಾಚ್‌ನ ಆರ್ ರಾಮ್ ಕುಮಾರ್ ಕೂಡ ಸಿಬಿಐನಲ್ಲಿ ನಿಯೋಜಿಲಾಗಿದೆ.