ಐಪಿಎಸ್ ರವಿ ಚೆನ್ನಣ್ಣನವರ “ಆ” ಬಾಲಕನ ಮನೆಗೋಗಿ…!
1 min readಬೆಂಗಳೂರು: ಉತ್ತರ ಕರ್ನಾಟಕದ ಹೆಮ್ಮೆಯ ಐಪಿಎಸ್ ಅಧಿಕಾರಿಯ ಮನಸ್ಥಿತಿಯನ್ನ ತೋರಿಸುವ ಮತ್ತೊಂದಿಷ್ಟು ಭಾವಚಿತ್ರಗಳನ್ನ ನಿಮ್ಮ ಮುಂದಿಡುತ್ತಿದ್ದೇವೆ. ತಾವೂ ಬೆಳೆದು ಬಂದ ದಾರಿಯನ್ನ ಸದಾಕಾಲ ಸ್ಮರಿಸಿಕೊಳ್ಳಲು ಅವರು ಕಂಡು ಕೊಳ್ಳುವ ರೀತಿಯ ಎಲ್ಲರಲ್ಲೂ ಖುಷಿಯನ್ನ ಮೂಡಿಸುತ್ತಿವೆ.
ವೀಡಿಯೋ..
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ, ಕೂಲಿ ಮಾಡುವ ಮನೆಯೊಂದರಲ್ಲಿದ್ದ ಬಾಲಕನ ಕೋರಿಕೆಯ ಮೇರೆಗೆ ಅವರ ಮನೆಗೋಗಿ, ಬಾಲಕ ಕೊಟ್ಟ ಊಟವನ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ತಾವೇ ಊಟ ಮಾಡಿದ ಪ್ಲೇಟನ್ನ ತೊಳೆದು, ತಮ್ಮ ಮೊದಲಿನ ಬದುಕನ್ನ ಸ್ಮರಿಸಿಕೊಂಡಿದ್ದಾರೆ.
ಓರ್ವ ಐಪಿಎಸ್ ಅಧಿಕಾರಿ ಮನೆಗೆ ಬಂದು, ಊಟ ಮಾಡಿ ಹೋಗಿದ್ದನ್ನ ಸದಾಕಾಲ ಸ್ಮರಿಸಿಕೊಳ್ಳುವ ಹಾಗೇ ಮಾಡಿದ್ದಾರೆ. ಜನ ಸಾಮಾನ್ಯರ ಪ್ರೀತಿಯನ್ನ ಪಡೆಯಲು ಇದಕ್ಕಿಂತ ಹೆಚ್ಚಿನದೇನು ಬೇಕು ಸ್ವಾಮಿ..