Posts Slider

Karnataka Voice

Latest Kannada News

“ಕೊಲ್ಕತ್ತಾ ನೈಟ್ ರೈಡರ್ಸ್” ಐಪಿಎಲ್‌ಗೆ “ಬಾದಷಾ”- ದಾಖಲೆ ಗೆಲುವು

1 min read
Spread the love

ಚೆನೈ: ತೀವ್ರ ಹಣಾಹಣಿಗೆ ಕಾರಣವಾಗತ್ತೆ ಎಂದುಕೊಂಡಿದ್ದ ಐಪಿಎಲ್ ಪೈನಲ್ ಪಂದ್ಯದಲ್ಲಿ ಶಾರುಖ್ ಖಾನ್, ಜೈ ಶಾ ಹಾಗೂ ಜೂಹಿ ಚಾವ್ಲಾ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಮೋಘ ಗೆಲುವು ದಾಖಲಿಸಿದೆ.

ಸನ್‌ರೈಸರ್ಸ ಹೈದ್ರಾಬಾದ್ ತಂಡವೂ ತನ್ನ ಎಲ್ಲ ವಿಕೆಟ್‌ಗಳನ್ನ ಕಳೆದುಕೊಂಡು 113 ರನ್ ಗಳಿಸಿತ್ತು. ಇದನ್ನ ಬೆನ್ನು ಹತ್ತಿದ ಕೆಕೆಆರ್ ತಂಡವೂ ಉತ್ತಮ ಪ್ರದರ್ಶನದ ಮೂಲಕ ಐಪಿಎಲ್ ಕಿರೀಟವನ್ನ ಮುಡಿಗೇರಿಸಿಕೊಂಡಿತು.

ಚೆನೈನ ಎಂ.ಎ.ಚಿದಂಬರ ಮೈದಾನದಲ್ಲಿ ನಡೆದ ಪೈನಲ್ ಪಂದ್ಯ ವೀಕ್ಷಿಸಲು ಕೆಕೆಆರ್ ತಂಡದ ಮೂವರು ಮಾಲೀಕರು ಮೈದಾನದಂಚಿನಲ್ಲಿದ್ದರು. ಐದಾರು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಶಾರುಖ್ ಖಾನ್ ಕೂಡಾ ಮಾಸ್ಕ್ ಹಾಕಿಕೊಂಡು ಕಂಡು ಬಂದರು.

ಕೆಕೆಆರ್ ಆರಂಭಿಕ ಆಘಾತವನ್ನ ಕಂಡರೂ ತದನಂತರ ಬಂದ ವೆಂಕಟೇಶ ಅಯ್ಯರ, ಗುರಬಾಜ್ ಜೊತೆಗೂಡಿ ಮೈದಾನದ ಮೂಲೆ ಮೂಲೆಗೂ ಬಾಲ್ ಕಳಿಸುವ ಮೂಲಕ ರನ್‌ಗಳನ್ನ ಹರಿಸಿದರು.

ವೆಂಕಟೇಶ 23 ಬಾಲ್‌ನಲ್ಲಿ 50 ರನ್ ಗಳಿಸಿದ್ದು ವಿಶೇಷವಾಗಿತ್ತು. ಹತ್ತು ವರ್ಷದ ನಂತರ ಕೆಕೆಆರ್ ಮತ್ತೆ ಟ್ರೋಪಿಯನ್ನ ಪಡೆದಂತಾಗಿದೆ.


Spread the love

Leave a Reply

Your email address will not be published. Required fields are marked *