Posts Slider

Karnataka Voice

Latest Kannada News

ಐಪಿಎಲ್ ನಲ್ಲಿ ‘ಧಾರವಾಡದ ಹುಡುಗ’: ಯಾರೆಂದೂ ಗೊತ್ತಾ ನಿಮಗೆ..?

1 min read
Spread the love

ಧಾರವಾಡ: ವಿಶ್ವದ ಅತ್ಯಂತ ಆಕರ್ಷಕ ‘ಚುಟುಕು ಕ್ರಿಕೆಟ್’ ಸೆಣಸಾಟಗಳಲ್ಲೊಂದಾಗಿ ಮಾರ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಹದಿಮೂರನೇ ಆವೃತ್ತಿಯ ಪ್ರಾರಂಭಕ್ಕೆ ಎರಡೇ ದಿನಗಳು ಬಾಕಿಯಿದ್ದು ‘ಕ್ರಿಕೆಟ್ ಕಾವು’ ಏರತೊಡಗಿದೆ. ಕೊರೋನಾ ಪಿಡುಗಿನ ಹಿನ್ನೆಲೆಯಲ್ಲಿ ಮಹಾಸಮರಕ್ಕಾಗಿ ದೂರದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ವೇದಿಕೆ ಸಿದ್ಧಗೊಂಡಿದೆ. ಪ್ರಶಸ್ತಿ ಹೋರಾಟದಲ್ಲಿ ಪಾಲ್ಗೊಳ್ಳಲಿರುವ ಎಂಟೂ ತಂಡಗಳು ದುಬೈ ತಲುಪಿ, ಐಸೋಲೇಶನ್ ಅವಧಿಯನ್ನೂ ಯಶಸ್ವಿಯಾಗಿ ಮುಗಿಸಿ ಕದನಕ್ಕೆ ಸಜ್ಜಾಗಿವೆ.

ಅಲ್ಪ ಅವಧಿಯಲ್ಲಿಯೇ ಐಪಿಎಲ್ ಕಂಡ ಯಶಸ್ಸಿನ ಹಿನ್ನೆಲೆಯಲ್ಲಿ ವಿಶ್ವದ ಪ್ರತಿ ಕ್ರಿಕೆಟ್ಟಿಗನೂ ಇದರಲ್ಲಿ ಆಡುವ ಕನಸು ಕಂಡಿರುತ್ತಾನೆ. ವಿಶ್ವದ ಅತ್ಯುನ್ನತ ೧೬೦ ಆಟಗಾರರ ಪೈಕಿ ಸ್ಥಾನ ಪಡೆಯುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಅಂತಹುದರಲ್ಲಿ ಶನಿವಾರದಿಂದ ಪ್ರಾರಂಭವಾಗುವ ಐಪಿಎಲ್‌ನ ಹದಿಮೂರನೇ ಅವೃತ್ತಿಯಲ್ಲಿ ‘ಧಾರವಾಡದ ಹುಡುಗ’ ಪವನ ದೇಶಪಾಂಡೆ, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್, ಬೆಂಗಳೂರು(ಆರ್‌ಸಿಬಿ) ಪರ ಆಡುತ್ತಿರುವುದು ಇಡೀ ಉತ್ತರ ಕರ್ನಾಟಕಕ್ಕೇ ಹೆಮ್ಮೆಯ ವಿಷಯ.

ಕೇವಲ ಎಂಟರ ಕಿರು ವಯಸ್ಸಿನಲ್ಲಿ ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ(ವಿಎಂಸಿಎ)ಯಲ್ಲಿ ಆಡಲು ಆರಂಭಿಸಿದ ಪವನ, ಕೆಲವೇ ಸಮಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ಗಳೆರಡರಲ್ಲೂ ಪ್ರಭುದ್ಧತೆ ಸಾಧಿಸಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಧಾರವಾಡ ವಲಯ ತಂಡದ ಖಾಯಂ ಆಟಗಾರರಾದರು. ಕೆಎಸ್‌ಸಿಎ ಬೆಂಗಳೂರಿನಲ್ಲಿ ನಡೆಸುವ ವಿವಿಧ ವಯೋಮಿತಿ ಅಂತರ ವಲಯ ಟೂರ್ನಿಯಲ್ಲೂ ಸತತ ಉತ್ತಮ ಸಾಧನೆಯೊಂದಿಗೆ ಎಲ್ಲ ವಯೋಮಿತಿ ರಾಜ್ಯ ತಂಡದಲ್ಲೂ ನಿಯಮಿತವಾಗಿ ಆಡುತ್ತ ಬಂದರು.

ತಂದೆ ಉದಯ ಧಾರವಾಡದಲ್ಲಿ ಪತ್ರಿಕಾ ವಿತರಕರು. ತಾಯಿ ಭಾರತಿಗೆ ಮಗನ ಸಾಮರ್ಥ್ಯದ ಮೇಲೆ ಅಪಾರ ವಿಶ್ವಾಸ. ಮಾಧ್ಯಮಿಕ ಹಾಗೂ ಪಿಯು ಪ್ರಥಮ ವರ್ಷದ ಶಿಕ್ಷಣವನ್ನು ಧಾರವಾಡದ ಪ್ರತಿಷ್ಠಿತ ಕೆ.ಇ,ಬೋಡ್ಸ್ ಸಂಸ್ಥೆಯಲ್ಲಿ ಪೂರೈಸಿದ ನಂತರ ಬೆಂಗಳೂರಿಗೆ ಹೋಗಿ ನೆಲೆಸಿದ ಪವನ್, ಕೆಎಸ್‌ಸಿಎ ಲೀಗ್ ಪಂದ್ಯಗಳಲ್ಲಿ ಸತತ ಅತ್ಯುತ್ತಮ ಪ್ರದರ್ಶನದಿಂದ ಆಯ್ಕೆದಾರರ ಗಮನ ಸೆಳೆದರಾದರೂ ರಾಜ್ಯ ತಂಡದ ಪರ ಆಡಲು ಸಾಕಷ್ಟು ಕಾಯಬೇಕಾಯಿತು. ಕೊನೆಗೂ ಅವರಿಗೆ ‘ಬ್ರೇಕ್’ ನೀಡಿದ ವರ್ಷ ೨೦೧೫. ಕೊಚ್ಚಿಯಲ್ಲಿ ಕೇರಳದ ಎದುರು ಕರ್ನಾಟಕದ ಪರ ಆಡಿದ ‘ಧಾರವಾಡದ ಹುಡುಗ’ ಮುಂದಿನ ವರ್ಷ ಡಿಸೆಂಬರ ೭ರಂದು ಮಹಾರಾಷ್ಟçದ ವಿರುದ್ಧ ರಣಜಿ ಪಂದ್ಯದೊAದಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೂ ಪಾದಾರ್ಪಣ ಮಾಡಿದರು.(ಪವನ, ಕರ್ನಾಟಕದ ಪರ ರಣಜಿ ಆಡಿದ ಧಾರವಾಡದ ನಾಲ್ಕನೇ ಆಟಗಾರ. ಆನಂದ ಕಟ್ಟಿ, ಸೋಮಶೇಖರ ಶಿರಗುಪ್ಪಿ ಹಾಗೂ ರಾಜು ಭಟ್ಕಳ ಮೊದಲ ಮೂವರು). ಮಹಾರಾಷ್ಟçದ ಎದುರಿನ ಮೊದಲ ಸರದಿಯಲ್ಲಿಯೇ ೭೦ ಓಟಗಳೊಂದಿಗೆ ತಂಡದ ‘ಟಾಪ್ ಸ್ಕೋರರ್’ ಎನಿಸಿಕೊಂಡ ಪವನ, ಸಾಕಷ್ಟು ರಾಷ್ಟಿçÃಯ ಆಟಗಾರರು ತಂಡದಲ್ಲಿದ್ದರೂ ರಾಜ್ಯ ತಂಡದಲ್ಲಿ ಇಂದೂ ತಮ್ಮ ಸ್ಥಾನ ಉಳಿಸಿಕೊಂಡಿರುವುದು ಆಯ್ಕೆದಾರರು ಅವರಲ್ಲಿಟ್ಟಿರುವ ಭರವಸೆಗೆ ಸಾಕ್ಷಿ.

‘ಟಿ೨೦’ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಈ ಎಡಗೈ ಬ್ಯಾಟ್ಸಮನ್ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್, ೨೦೧೮ರಲ್ಲಿ ಮೊದಲ ಬಾರಿ ಆರ್‌ಸಿಬಿಯಿಂದ ಖರೀದಿಸಲ್ಪಟ್ಟರೂ ಆಡುವ ಅವಕಾಶದಿಂದ ವಂಚಿತರಾದರು. ಕಳೆದ ವರ್ಷದ ಉತ್ತಮ ‘ಫಾರಂ’ ಆರ್‌ಸಿಬಿ ಅವರನ್ನು ಮತ್ತೆ ಖರೀದಿ ಮಾಡುವಂತೆ ಮಾಡಿತು. ಇದುವರೆಗೆ ಇಪ್ಪತ್ತು ಟಿ೨೦ ಪಂದ್ಯಗಳಲ್ಲಿ ೪೨೬ ಓಟಗಳಿಸಿದ್ದಲ್ಲದೇ ನಾಲ್ಕು ವಿಕೆಟ್ ಪಡೆದಿರುವ ಪವನ, ಎಂಟು ಪ್ರಥಮ ದರ್ಜೆ ಪಂದ್ಯಗಳಲ್ಲಿ ೨೫೫ ಓಟ ಸಂಪಾದಿಸಿದ್ದು, ೧೪ ಹುದ್ದರಿಗಳನ್ನೂ ಪಡೆದಿದ್ದಾರೆ. ಇಪ್ಪತ್ಮೂರು ‘ಲಿಸ್ಟ್-ಎ’ ಪಂದ್ಯಗಳಲ್ಲಿ ೭೭೭ ಓಟ ಗಳಿಸಿದ್ದಲ್ಲದೇ ೨ ವಿಕೆಟ್‌ಗಳನ್ನೂ ಪಡೆದಿದ್ದಾರೆ.

ಬುಧವಾರವಷ್ಟೇ(ಸಪ್ಟೆಂಬರ ೧೬) ತಮ್ಮ ಜನ್ಮದಿನವನ್ನಾಚರಿಸಿಕೊಂಡ ಪವನ್‌ಗೆ ಈ ಸಲವಾದರೂ ಆಡುವ ಅವಕಾಶ ಸಿಗುವ ನಿರೀಕ್ಷೆಯಿದೆ. ಈ ನಿರೀಕ್ಷೆ ಹುಸಿಹೋಗದಿರಲಿ, ಧಾರವಾಡದ ಈ ಪ್ರತಿಭೆಗೆ ಅವಕಾಶ ದೊರೆತು ಅದು ಮಿಂಚುವಂತಾಗಲಿ ಎಂದು ಎಲ್ಲರ ಹಾರೈಕೆ.


Spread the love

Leave a Reply

Your email address will not be published. Required fields are marked *