ಐಪಿಎಲ್ ಹರಾಜು: ಯಾರು ಎಷ್ಟು ಕೋಟಿಗೆ ಬಿಡ್ ಆದ್ರು ಗೊತ್ತಾ….!

ಬೆಂಗಳೂರು: ಐಪಿಎಲ್ 2022 ನ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಸ್ಟಾರ್ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಬಿಡ್ ಆಗಿದ್ದು, ಈ ಬಾರಿ ಯುವ ಆಟಗಾರ ಇಶಾನ್ ಕಿಶನ್ ಅತಿ ಹೆಚ್ಚು ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

ಇಶಾನ್ ಕಿಶನ್ 15.25 ಕೋಟಿ ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದರೆ, ದೀಪಕ್ ಚಹಾರ್ 14 ಕೋಟಿರಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ 12.25 ಕೋಟಿಗೆ ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಬಿಡ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡ ಶಾರ್ದೂಲ್ ಠಾಕೂರ್ ನನ್ನು 10.75 ಕೋಟಿಗೆ ಕೊಂಡಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಲಾ 10.75 ಕೋಟಿ ನೀಡಿ ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ರನ್ನು ಖರೀದಿಸಿದೆ.
ಇನ್ನು ನಿಕೋಲಸ್ ಪೂರನ್ 10.75 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಕನ್ನಡಿಗ ಪ್ರಸಿದ್ಧ ಕೃಷ್ಣ 10 ಕೋಟಿಗೆ ರಾಜಸ್ಥಾನ ರಾಯಲ್ಸ್ ಗೆ ಬಿಡ್ ಆಗಿದ್ದಾರೆ. ಲಾಕಿ ಫರ್ಗುಸನ್ 10 ಕೋಟಿಗೆ ಗುಜರಾತ್ ಟೈಟನ್ಸ್ ಗೆ ಬಿಡ್ ಆಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ 9.25 ಕೋಟಿ ನೀಡಿ ರಬಾಡರನ್ನು ಖರೀದಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರ್ಷಲ್ ಪಟೇಲ್ ವನಿಂದು ಹಸರಂಗ ರನ್ನು ತಲಾ 10.75 ಕೋಟಿ ನೀಡಿ ಖರೀದಿಸಿದ್ದರೆ, ಫಾಫ್ ಡು ಪ್ಲೆಸಿಸ್ ರನ್ನು 7 ಕೋಟಿ ರೂ. ಹಾಗೂ ಜೋಷ್ ಹ್ಯಾಜಲ್ ವುಡ್ ರನ್ನು 7.75 ಕೋಟಿ ರೂ. ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರನ್ನು 5.5 ಕೋಟಿ ರೂ. ನೀಡಿ ಖರೀದಿಸಿದೆ.