ಶ್… ! ಇಟಿಗಟ್ಟಿ ಬಳಿ ನಡೆಯುತ್ತಿದೆ ತನಿಖೆ…
1 min readಧಾರವಾಡ: ಜನೇವರಿ 15ರಂದು ದಾವಣಗೆರೆಯ ಟೆಂಪೋಗೆ ಟಿಪ್ಪರ್ ಡಿಕ್ಕಿ ಹೊಡೆದ ಪ್ರಕರಣದಲ್ಲಿ 12 ಜನರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ತನಿಖೆಯನ್ನ ನಡೆಸುತ್ತಿದ್ದಾರೆ.
ದಾವಣಗೆರೆ ಮೂಲದ 17 ಮಹಿಳೆಯರು ಗೋವಾಗೆ ಹೊರಟಾಗ ಇಟಿಗಟ್ಟಿ ಬಳಿ ದುರ್ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ, ಸಂತಾಪ ಸೂಚಿಸಿದ್ದರು. ಅಷ್ಟೇ ಅಲ್ಲ, ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಸರಕಾರಕ್ಕೆ ಪತ್ರ ಬರೆದು ಆದೇಶಿಸಿತ್ತು.
ಫೆಬ್ರುವರಿ 15ರ ಒಳಗೆ ಸುಪ್ರೀಂಕೋರ್ಟಿಗೆ ಮಾಹಿತಿಯನ್ನ ನೀಡಬೇಕಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಹೆದ್ದಾರಿ ಕಮೀಷನರ್ ಸೇರಿದಂತೆ ಹಲವರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮರಳು ತುಂಬಿದ ಟಿಪ್ಪರ್ ಟೆಂಪೋಗೆ ಡಿಕ್ಕಿ ಹೊಡೆದಿದ್ದನ್ನ ಕಿರಿಯ ಅಧಿಕಾರಿಗಳು ಮಾಹಿತಿಯನ್ನ ನೀಡಿ, ಸ್ಥಳವನ್ನ ತೋರಿಸುತ್ತಿದ್ದಾರೆ. ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶ್ರೀಧರ ಸತಾರೆ, ಸಂಚಾರಿ ಠಾಣೆ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.