ಹುಬ್ಬಳ್ಳಿ “ಇನ್‌ಆರ್ಬಿಟ್” ಮಾಲ್‌ನ ಫುಡ್‌ಝೋನ್‌ಲ್ಲಿ ಕುಡಿಯಲು ನೀರಿಲ್ಲ… ಮಾಲ್‌ನಲ್ಲಿ “ಅರ್ಧ ಲೀಟರ್” ನೀರಿಗೆ ಬರೋಬ್ಬರಿ 40ರೂಪಾಯಿ…

ಹುಬ್ಬಳ್ಳಿ: ಕಾಲ ಬದಲಾದಂತೆ ಶಹರಗಳು ಬದಲಾಗುವುದು ಸಹಜ. ಆದರೆ, ಸಹಜತೆಯನ್ನ ಅಸಹಜತೆಯಿಂದ ರೂಪಿಸುವಲ್ಲಿ ಹೊಸದಾಗಿ ವಾಣಿಜ್ಯನಗರಿಯಲ್ಲಿ ಆರಂಭಗೊಂಡಿರುವ ಇನ್‌ಆರ್ಬಿಟ್ ಮುಂದಾಗಿರುವುದು ಸೋಜಿಗ ಮೂಡಿಸಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಹೊಸದಾಗಿ ಆರಂಭಗೊಂಡಿರುವ ಮಾಲ್‌ನೊಳಗೆ ಕಾಲಿಟ್ಟರೇ ಆಕರ್ಷಿತರಾಗುವುದು ಸಹಜ. ಆದರೆ, ಮೇಲ್ ಮಹಡಿಯ ಫುಡ್ ಝೋನ್‌ಗೆ ಹೋದಾಗ ಇಲ್ಲಿನ ಸತ್ಯ ಅರಿವಿಗೆ ಬರತ್ತೆ.

ಮಕ್ಕಳೊಂದಿಗೆ ಹೋದ ಪಾಲಕರು, ಅವರಿಷ್ಟದ ತಿಂಡಿ-ತಿನಿಸು ಕೊಡಿಸಿದಾಗ ಅಲ್ಲೇ ನೀರೇ ಸಿಗಲ್ಲ. ಬದಲಿಗೆ ಮೂರನೇಯ ಪ್ಲೋರಿಗೆ ಹೋಗಿ ನೀರು ತರಬೇಕು. ಅಲ್ಲಿ ನೋಡಿದರೇ, ಅರ್ಧ ಲೀಟರ್ ನೀರಿಗೆ ಬರೋಬ್ಬರಿ 40 ರೂಪಾಯಿ.
ಇಂತಿಪ್ಪ ಮಾಲ್‌ಗೆ ಹೋಗುವ ಮುನ್ನ ಸ್ವಲ್ಪ ಯೋಚಿಸುವುದು ಒಳಿತು. ಇಲ್ಲದಿದ್ದರೇ, ನೀರಿಗೇನೆ ನೂರಾರೂ ರೂಪಾಯಿ ಖರ್ಚು ಮಾಡಬೇಕಾಗಬಹುದು.