ಮತ್ತಿನಲ್ಲಿದ್ದ ಲಾರಿ ಚಾಲಕ: ಹುಬ್ಬಳ್ಳಿ ಬೈಪಾಸ್ ನಲ್ಲಿ ಇನ್ನೋವಾ ಕ್ರಿಸ್ಟಾ ಕಮರಿಗೆ.. ಹಲವರಿಗೆ ಗಾಯ..!

ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಲಾರಿಯೊಂದು ತಮ್ಮ ಎದುರಿಗೆ ಬಂದಿದ್ದರಿಂದ ಹೊಸ ಇನ್ನೋವಾ ಕಾರು ಕಮರಿಗೆ ಜಾರಿದ ಘಟನೆ ತಾರಿಹಾಳ ಸಮೀಪ ನಡೆದಿದ್ದು, ವಾಹನದಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಧಾರವಾಡದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರಿಗೆ ಹುಬ್ಬಳ್ಳಿಯಿಂದ ಧಾರವಾಡದತ್ತ ಹೊರಟಿದ್ದ ಲಾರಿಯು ಎದುರಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ಚಾಲಕ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿದ್ದರಿಂದ, ಇನ್ನೋವಾ ಕಾರು ಚಾಲಕ ಸೈಡ್ ತೆಗೆದುಕೊಳ್ಳುವಾಗ ಕಾರು ಕಮರಿಗೆ ಜಾರಿದೆ.
ಇನ್ನೋವಾದಲ್ಲಿದ್ದ ನಾಲ್ಕು ಮಹಿಳೆಯರು ಸೇರಿದಂತೆ ಐದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನ ಅಂಬ್ಯುಲೆನ್ಸನಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೈಪಾಸನಲ್ಲಿ ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದರೂ ಕೂಡಾ ಲಾರಿ ಚಾಲಕರ ಮದ್ಯ ಸೇವನೆ ಕಡಿಮೆಯಾಗುತ್ತಿಲ್ಲ. ಇದೇ ಕಾರಣದಿಂದ ಅಪಘಾತಗಳು ನಡೆಯುತ್ತಲೇ ಇವೆ.
ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸುತ್ತಿದ್ದವನನ್ನ ಧಾರವಾಡ ಗ್ರಾಮೀಣ ಠಾಣೆಯ ಹೈವೇ ಪೆಟ್ರೋಲಿಂಗ್ ನವರು ನಿಲ್ಲಿಸಿ, ವಾಹನವನ್ನ ವಶಕ್ಕೆ ಪಡೆದಿದ್ದಾರೆ.